ಸುಬ್ರಹ್ಮಣ್ಯ: ಮರಬಿದ್ದು ಧರೆಗುರುಳಿದ 11 ಕೆ.ವಿ ವಿದ್ಯುತ್ ಕಂಬಗಳು

0

ಸುಬ್ರಹ್ಮಣ್ಯ, ಹರಿಹರ, ಬಾಳುಗೋಡು, ಕೊಲ್ಲಮೊಗ್ರು, ಕಲ್ಮಕಾರು, ಐನೆಕಿದು ಗೆ ವಿದ್ಯುತ್ ಸರಬರಾಜು ಇರುವುದಿಲ್ಲ

ಸುಬ್ರಹ್ಮಣ್ಯ ಕಾಶಿಕಟ್ಟೆ ಬಳಿ ಇಂದು ಮರವೊಂದು ವಿದ್ಯುತ್ ಲೈನ್ ಮೇಲೆ ಬಿದ್ದು 11 ಕೆ.ವಿ ವಿದ್ಯುತ್ ಕಂಬಗಳು ಧರೆಗುಳಿದ ಘಟನೆ ವರದಿಯಾಗಿದೆ.

11 ಕೆ.ವಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದ ಕಾರಣ ಸುಬ್ರಹ್ಮಣ್ಯ ಪೇಟೆ, ಹರಿಹರ, ಬಾಳುಗೋಡು, ಕೊಲ್ಲಮೊಗ್ರು, ಕಲ್ಮಕಾರು, ಐನೆಕಿದು ಗ್ರಾಮಗಳಿಗೆ ಹಾಗೂ ಸುಬ್ರಹ್ಮಣ್ಯದಿಂದ ಹಾಲೆಮಜಲು ತನಕ ವಿದ್ಯುತ್ ಸರಬರಾಜು ಇರುವುದಿಲ್ಲ ಎಂಬುದಾಗಿ ಸುಬ್ರಹ್ಮಣ್ಯ ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.