ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ : ಅಭಿಪ್ರಾಯ ಸಂಗ್ರಹಕ್ಕೆ ಸುಳ್ಯಕ್ಕೆ ಕೆಪಿಸಿಸಿ ಮುಖಂಡರ ಆಗಮನ

0

ಕ್ಕಿಕ್ಕಿರಿದು ತುಂಬಿರುವ ಕಾರ್ಯಕರ್ತರು, ನಾಯಕರುಗಳು

ಕೆ ಪಿ ಸಿ ಸಿ ಯಿಂದ ಹಿಡಿದು ಗ್ರಾಮ ಮಟ್ಟದ ಸದಸ್ಯರವರೆಗೆ ವೀಕ್ಷಕರ ಭೇಟಿ ಗೆ ಅವಕಾಶ

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯ ಕುರಿತ ಸಭೆಗೆ ವೀಕ್ಷಕರ ಆಗಮನವಾಗಿದ್ದು, ಸುಳ್ಯ ಸದರ್ನ್ ರೆಸಿಡೆನ್ಸಿ ಬಳಿ ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರುಗಳು ಜಮಾಯಿಸಿದ್ದಾರೆ.

ಸಭೆಗೆ ವೀಕ್ಷಕರುಗಳಾಗಿ ಕೆ ಪಿ ಸಿ ಸಿ ಮುಖಂಡರುಗಳು ಮತ್ತು ವೀಕ್ಷಕರುಗಳಾದ ಎಂ. ನಾರಾಯಣ ಸ್ವಾಮಿ, ಡಿಸಿಸಿ ಅಧ್ಯಕ್ಷ ಹರೀಶ್‌ ಕುಮಾರ್, ಪುತ್ತೂರು ಶಾಸಕ ಅಶೋಕ್ ಕುಮಾ‌ರ್ ರೈ ಆಗಮಿಸಿದ್ದು ನಾಯಕರ ಭೇಟಿಗಾಗಿ ಅವಕಾಶವನ್ನು ನೀಡಲಾಗಿದೆ.

ಮೊದಲಿಗೆ ಕೆ ಪಿ ಸಿ ಸಿ ಹಾಲಿ ಹಾಗೂ ಮಾಜಿ ಸದಸ್ಯರು, ಬಳಿಕ ಡಿ ಸಿ ಸಿ ಹಾಲಿ ಮಾಜಿ ಸದಸ್ಯರು, ವಿವಿಧ ನಿಗಮಗಳ ಸದಸ್ಯರುಗಳು, ಬಳಿಕ ನಗರ ಮತ್ತು ಗ್ರಾಮ ಮಟ್ಟ ದ ಬೂತ್ ಅಧ್ಯಕ್ಷರು ಕಾರ್ಯಕರ್ತರು ಗಳಿಗೆ ವೀಕ್ಷಕರ ಭೇಟಿ ಮತ್ತು ಅಭಿಪ್ರಾಯ ನೀಡಲು ಅವಕಾಶ ನೀಡ ಲಾಗಿದೆ.

ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ ಸಂಗ್ರಹಿಸಿ ವರದಿಯನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾ‌ರ್ ಅವರಿಗೆ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.