ಗ್ರಾಮಸಭೆಯಲ್ಲಿ ವಿಷಯ ಚರ್ಚೆಯಾದರೂ ಇನ್ನೂ ಸರಿಪಡಿಸದ ಮೆಸ್ಕಾಂ















ಉಬರಡ್ಕ ಮಿತ್ತೂರು ಗ್ರಾಮದ ಉಬರಡ್ಕ ತಿರುವಿನಲ್ಲಿ ಟ್ರಾನ್ಸ್ ಫಾರ್ಮರ್ ಇರುವ ಕಂಬವು ಬೀಳುವ ಸ್ಥಿತಿಯಲ್ಲಿದೆ.

ಇತ್ತೀಚಿಗೆ ನಡೆದ ಗ್ರಾಮಸಭೆಯಲ್ಲಿ ವಿಷಯ ಪ್ರಸ್ತಾಪವಾಗಿ ಸಂಜೆಯೊಳಗೆ ಸರಿಪಡಿಸುತ್ತೇವೆ. ಎಂದು ಮೆಸ್ಕಾಂ ಇಂಜಿನಿಯರ್ ತಿಳಿಸಿದ್ದು, ಗ್ರಾಮ ಸಭೆ ಕಳೆದು ವಾರವಾಗುತ್ತಾ ಬಂದರೂ ಇನ್ನೂ ಕೂಡ ಸರಿಪಡಿಸಿಲ್ಲ.
ಹೆಚ್ಚು ಮಳೆ ಬಂದರೆ ಕಂಬ ಸಮೇತ ಟಿ.ಸಿ ಹೊಳೆಗೆ ಬಿದ್ದು ನೀರಲ್ಲಿ ಕೊಚ್ಚಿ ಹೋಗಬಹುದು.ಆದ್ದರಿಂದ ಆದಷ್ಟು ಬೇಗ ಸರಿಪಡಿಸಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.










