ಎಣ್ಮೂರು ಶ್ರೀ ಸೀತಾರಾಮಾಂಜನೇಯ ಭಜನಾ ಮಂದಿರ ವಾರ್ಷಿಕ ಹಬ್ಬ ಆಚರಣಾ ಸಮಿತಿ ರಚನೆ

0

ಅಧ್ಯಕ್ಷರಾಗಿ ನಾಗೇಶ್ ಆಳ್ವ, ಕಾರ್ಯದರ್ಶಿಯಾಗಿ ಸಚಿನ್ ಆರೆಂಬಿ ಆಯ್ಕೆ

ಎಣ್ಮೂರು ಶ್ರೀ ಸೀತಾರಾಮಾಂಜನೇಯ ಭಜನಾ ಮಂದಿರದ ವಾರ್ಷಿಕ ಸಭೆಯು ಜೂನ್ ೨೮ ರಂದು ಮಂದಿರದಲ್ಲಿ ನಡೆಯಿತು. ಹಬ್ಬ ಆಚರಣಾ ಸಮಿತಿಯ ಅಧ್ಯಕ್ಷರಾದ ಯೋಗಾನಂದ ಉಳ್ಳಲಾಡಿ ಇದರ ಅಧ್ಯಕ್ಷತೆಯಲ್ಲಿ ನಡೆಯಿತು.
ಗತ ವರ್ಷದ ವರದಿಯನ್ನು ಹಾಗೂ ಖರ್ಚು ವೆಚ್ಚಗಳನ್ನು ಸುದಿನ್ ಕುಮಾರ್ ರೈಯವರು ಸಭೆಯಲ್ಲಿ ಮಂಡಿಸಿದರು.


ಈ ಬಾರಿ ನಡೆಸಬೇಕಾದ ಆಚರಣೆಯ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ನೂತನ ಸಮಿತಿಯ ರಚಿಸಲಾಯಿತು.


ಅಧ್ಯಕ್ಷರಾಗಿ ನಾಗೇಶ್ ಆಳ್ವ, ಉಪಾಧ್ಯಕ್ಷರಾಗಿ ಮಾಯಿಲಪ್ಪ ಗೌಡ ಪಟ್ಟೆ, ಕಾರ್ಯದರ್ಶಿಯಾಗಿ ಸಚಿನ್ ಆರೆಂಬಿ, ಜೊತೆ ಕಾರ್ಯದರ್ಶಿ ಪ್ರಮೋದ್ ಕುಮಾರ್ ಕಲ್ಲೇರಿ ಹಾಗೂ ಕೋಶಾಧಿಕಾರಿಯಾಗಿ ಲಿಂಗಪ್ಪ ಬೆಳ್ಳಾರೆ ಆಯ್ಕೆಯಾಗಿದ್ದಾರೆ.


ಸಭೆಯಲ್ಲಿ ಅನುಪ್ ಕುಮಾರ್ ರೈ, ಕಾರ್ತಿಕ್ ಕಲ್ಲೇರಿ, ಕೊರಗಪ್ಪ, ದೇವಿಪ್ರಸಾದ್ ಬಿ.ಕೆ., ಸುಂದರ ಗೌಡ ಆರೆಂಬಿ, ವಸಂತ ಕುಕ್ಕಾಯಕೋಡಿ, ಪ್ರಕಾಶ್ ರೈ ಕುಳಾಯಿತ್ತೋಡಿ, ಆನಂದ ಗೌಡ ಆರೆಂಬಿ , ವಿಶ್ವನಾಥ ರೈ ಕುಳಾಯಿತ್ತೋಡಿ, ನವೀನ್‌ಚಂದ್ರ ರೈ ಗುತ್ತು, ಯೋಗಾನಂದ ಬಿ. ಉಳ್ಳಲಾಡಿ, ಕೀರ್ತನ್ ಕಳತ್ತಜೆ, ಪ್ರದೀಪ ರೈ ಗುತ್ತು, ಧ್ಯಾನ್ ಎಸ್., ಪ್ರಶಾಂತ್ ನರ್ಲಡ್ಕ, ದಾಮೋದರ ಗೌಡ, ರವಿವರ್ಮ ಮತ್ತು ಸುದಿನ್ ಕುಮಾರ್ ರೈ ಉಪಸ್ಥಿತರಿದ್ದರು.