ಉಬರಡ್ಕ ಮಿತ್ತೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ಶ್ರೀ ದೇವತಾರಾಧನಾ ಸಮಿತಿ ಆಶ್ರಯದಲ್ಲಿ ಆ.27, 28 ರಂದು ನಡೆಯುವ ಗಣೇಶೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ಜು.16 ರಂದು ಉಬರಡ್ಕ ಶ್ರೀ ನರಸಿಂಹ ಶಾಸ್ತಾವು ದೇವಾಲಯದಲ್ಲಿ ನಡೆಯಿತು.









ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯಕರ ಮಡ್ತಿಲ, ದೇವತಾರಾಧನಾ ಸಮಿತಿ ಅಧ್ಯಕ್ಷ ಶಶಿಧರ ನಾಯರ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜತ್ತಪ್ಪ ಗೌಡ ಶೆಟ್ಟಿಮಜಲು, ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಸಂದೀಪ್ ಮದುವೆಗದ್ದೆ, ಖಜಾಂಜಿ ರಾಘವ ಬಿ.ರಾವ್, ಸಂಚಾಲಕ ಶ್ಯಾಮ್ ಪಾನತ್ತಿಲ, ಅರ್ಚಕ ಮಧ್ವರಾಜ್ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯ ದಿವಾಕರ ಶೆಟ್ಟಿಹಿತ್ಲು, ಗ್ರಾಪಂ ಸದಸ್ಯ ಪ್ರಶಾಂತ್ ಪಾನತ್ತಿಲ, ಅಪ್ಪಯ್ಯ ಸೂಂತೋಡು, ಹರಿಪ್ರಸಾದ್ ಪಾನತ್ತಿಲ, ರಮೇಶ್ ಪಾನತ್ತಿಲ, ಶ್ರೀಮತಿ ಶೈಲಾ ದಿವಾಕರ್, ಪ್ರದ್ಯುಮ್ನ, ಯು., ದಿನೇಶ್ ಬೈತಡ್ಕ, ಪದ್ಮಯ್ಯ ನಾಯ್ಕ್, ಗಿರಿಧರ ದಾಸ್, ಮಾನ ಪಾಟಾಳಿ, ಶೀನಪ್ಪ ಗೌಡ ಸೂರ್ಯಮನೆ, ರಮೇಶ್ ಪೂಜಾರಿ, ಪುನೀತ್ ಮತ್ತಿತರರು ಉಪಸ್ಥಿತರಿದ್ದರು.










