ಪಾಣತ್ತೂರು: ನೀರಿನಲ್ಲಿ ಬೈಕ್ ಸಮೇತ ಕೊಚ್ಚಿ ಕೊಂಡು ಹೋದ ಯುವಕನ ಶವ ಪತ್ತೆ

0

ಬೆಳಗಾಂ ಮೂಲದ ಯುವಕ‌ ದುರಗಪ್ಪ ಮಾದರ ಮೃತ ಪಟ್ಟ ದುರ್ದೈವಿ

ಪಾಣತ್ತೂರಿನ‌ ಮಂಞನಡ್ಕ ಎಂಬಲ್ಲಿ ಪ್ಲಾಂಟೇಷನ್ ನಲ್ಲಿ ‌ಹಿಟಾಚಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ
ಬೆಳಗಾಂ ಮೂಲದ ಯುವಕನೋರ್ವ
ಜು.17 ರಂದು ಮುಳುಗು ಸೇತುವೆ ದಾಟುವ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದು ಅವಿರತ ಹುಡುಕಾಟದಿಂದ ಇಂದು ಬೆಳಗ್ಗೆ ಯುವಕನ ಶವ ಪತ್ತೆಯಾಗಿದೆ.

ಕೇರಳ ಸರಕಾರದ ಅಧೀನಕ್ಕೊಳಪಡುವ ಗೇರು ಬೀಜದ ಪ್ಲಾಂಟೇಷನ್ ನಲ್ಲಿ ಹಿಟಾಚಿಯಲ್ಲಿ ಹೆಲ್ಪರ್ ಕೆಲಸ ಮಾಡುತ್ತಿದ್ದ 19 ವರ್ಷ ಪ್ರಾಯದ ಯುವಕ ಬೆಳಗಾಂ ಮೂಲದ ಶಿಂದಗಿಯ ದುರಗಪ್ಪ ಮಾದರ ಎಂಬಾತ ಮೃತ ಪಟ್ಟ ದುರ್ದೈವಿ.

ಹಿಟಾಚಿ ಚಾಲಕ ಯುವಾನಂದ ಮಧ್ಯಾಹ್ನ ಊಟ ತರುವಂತೆ ಪಾಣತ್ತೂರು ಕಡೆಗೆ ತನ್ನ ಬೈಕಿನಲ್ಲಿ ದುರಗಪ್ಪ ಮಾದರನನ್ನುಕಳುಹಿಸಿದ್ದರು. ಅದೇ ರಸ್ತೆಯಲ್ಲಿ ಬರಬೇಕಾದರೆ ಮಂಞನಡ್ಕ ದೇವಸ್ಥಾನದ ಕೆಳಭಾಗದಲ್ಲಿ ಮುಳುಗು ಸೇತುವೆಯೊಂದಿದ್ದು ವಿಪರೀತ ಮಳೆಯಿಂದಾಗಿ ಸೇತುವೆ ಮೇಲೆ ನೀರಿನ ಹರಿವುಹೆಚ್ಚಾಗಿರುವುದನ್ನು ಅಂದಾಜಿಸಲಾಗದೆ ಯುವಕ ಬೈಕ್ ದಾಟಿಸುವಾಗ ನೀರಿನ‌ ಸೆಳೆತಕ್ಕೆ ಸಿಕ್ಕಿ ಬೈಕ್ ಸಮೇತ ಕೊಚ್ಚಿಕೊಂಡು ಹೋಗಿದ್ದರು.


ಯುವಕನ ಪತ್ತೆಗಾಗಿ ಎನ್.ಡಿ.ಆರ್.ಎಫ್ ನವರು ಹಾಗೂ ಸ್ಥಳೀಯ ರು ನಿರಂತರವಾಗಿ ಹುಡುಕಾಟ ನಡೆಸಿದ್ದು ಜು. 21 ರ ಬೆಳಗ್ಗೆ ಬಟ್ಟೆಕುಂಡು ಗುಂಡಿಯಲ್ಲಿ ಬೈಕ್ ಸಮೇತ ಯುವಕನ ಶವಪತ್ತೆಯಾಗಿರುವುದಾಗಿ ಎಂದು ತಿಳಿದು ಬಂದಿದೆ.