ಜು. 23ರಿಂದ ಕುಲ್ಕುಂದ ಬಸವೇಶ್ವರ ದೇವಸ್ಥಾನದಲ್ಲಿ ಲಕ್ಷ್ಮಿ ನಾರಾಯಣ ಹೋಮ

0

ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಬಸವೇಶ್ವರ ದೇವಸ್ಥಾನದಲ್ಲಿ ಜು.23 ರಿಂದ 10 ದಿನಗಳ ಕಾಲ ನಿರಂತರವಾಗಿ ಶ್ರೀ ಲಕ್ಷ್ಮೀನಾರಾಯಣ ಹೃದಯ ಹೋಮ ನಡೆಯಲಿರುವುದು. ಲಕ್ಷ್ಮೀನಾರಾಯಣ ಹೃದಯ ಎಂಬ ಪೌರಾಣಿಕ ಮಂತ್ರಗಳು ಅಥರ್ವಣ ರಹಸ್ಯದಲ್ಲಿ ಹೇಳಲ್ಪಟ್ಟಿದೆ. ಶ್ರೇಷ್ಠತವಾದ ಹಾಗೂ ಅತ್ಯಂತ ಶಕ್ತಿಯುತವಾದ ಜಪ ಹಾಗೂ ಹೋಮಗಳಾಗಿದೆ. ಭಕ್ತರೆಲ್ಲರ ಕ್ಷೇಮಕ್ಕಾಗಿ ಈ ಹೋಮ ನಡೆಯಲಿದ್ದು, ದಿನಂಪ್ರತಿ ಅನ್ನಸಂತರ್ಪಣೆಯ ನಡೆಯಲಿದೆ. ಸರ್ವ ಭಕ್ತರು ಭಾಗವಹಿಸುವಂತೆ ದೇವಳದ ಆಡಳಿತ ಮಂಡಳಿಯವರು ತಿಳಿಸಿರುತ್ತಾರೆ.