ಸ. ಹಿ.ಪ್ರಾ.ಶಾಲೆ ಬಂಗ್ಲೆಗುಡ್ಡೆ ಕೊಲ್ಲಮೊಗ್ರು ಇಲ್ಲಿನ ವಿದ್ಯಾರ್ಥಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಲ್ಲಮೊಗ್ರು, ಸುಳ್ಯ ವತಿಯಿಂದ ಪರಿಸರ ಜಾಗೃತಿಯ ಬಗ್ಗೆ ಕಾರ್ಯಕ್ರಮವನ್ನು ಜು.21 ರಂದು ಹಮ್ಮಿಕೊಳ್ಳಲಾಯಿತು.ಇದರಲ್ಲಿ ತರಗತಿವಾರು ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ಏರ್ಪಡಿಸಿ, ಬಹುಮಾನಗಳನ್ನು ವಿತರಿಸಿದರು, ಕಾರ್ಯಕ್ರಮದಲ್ಲಿ ಹಣ್ಣಿನ ಗಿಡಗಳನ್ನು ಶಾಲಾ ಮಂತ್ರಿಮಂಡಲದ ನಾಯಕರಿಗೆ ವಿತರಿಸಲಾಯಿತು.
















ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ವಲಯ ಒಕ್ಕೂಟದ ಅಧ್ಯಕ್ಷರು ಹಾಗೂ ಕೊಲ್ಲಮೊಗ್ರು A ಒಕ್ಕೂಟದ ಅಧ್ಯಕ್ಷರಾದ ಶ್ರೀಯುತ ತೀರ್ಥರಾಮ ದೋಣಿಪಳ್ಳ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಕಮಲ ಎ ಇವರು ವಹಿಸಿದ್ದರು. ಅತಿಥಿಗಳಾಗಿ ಧ.ಕ್ಷೇ.ಗ್ರಾ.ಯೋ.ಇದರ ಸುಳ್ಯ ತಾಲೂಕಿನ ಕೃಷಿ ಅಧಿಕಾರಿ ರಮೇಶ್ ಗೌಡ,
ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮೋಹಿನಿ ಕಟ್ಟ, ಉಪಾಧ್ಯಕ್ಷರಾದ ಮಾದವ ಚಾಂತಾಳ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಚಾಂತಾಳ, ಶಾಲಾ ಹಳೆವಿದ್ಯಾರ್ಥಿ ಸಂಘ ಹಾಗೂ ಕೊಲ್ಲಮೊಗ್ರು, ಶಿರೂರು,ಚಾಂತಾಳ ಒಕ್ಕೂಟದ ಉಪಾಧ್ಯಕ್ಷರಾದ ಶ್ರೀಯುತ ಚಂದ್ರಶೇಖರ ಕೋನಡ್ಕ, ತಾಲೂಕು ಭಜನಾ ಪರಿಷತ್ತಿನ ಸಂಯೋಜಕರು ಮತ್ತು ವಿಪತ್ತು ನಿರ್ವಹಣಾ ಘಟಕದ ಪ್ರತಿನಿಧಿ ಶ್ರೀಯುತ ಸತೀಶ್ T N, ಕೊಲ್ಲಮೊಗ್ರು B ಒಕ್ಕೂಟದ ಅಧ್ಯಕ್ಷರಾದ ಹೇಮಂತ್ ದೊಲನಮನೆ , ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕರಾದ ಶ್ರೀಯುತ ಬಾಲಕೃಷ್ಣಗೌಡ, ಪೋಷಕರು,ಶಿಕ್ಷಕ ವೃಂದ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.










