ಬಾಳಿಲ: ಬೊಮ್ಮನಮಜಲು ಬಳಿ ಬೃಹತ್‌ ಮರ ಧರೆಗುರುಳಿ ರಸ್ತೆ ಬಂದ್, 7 ವಿದ್ಯುತ್ ಕಂಬಗಳು ಧರಾಶಾಹಿ

0

ಜು. 26ರಂದು ಸಂಜೆ ಮತ್ತು ರಾತ್ರಿ ಬೀಸಿದ ಭೀಕರ ಗಾಳಿಗೆ ಸುಳ್ಯ ತಾಲೂಕಿನ ಹಲವು ಭಾಗಗಳಲ್ಲಿ ಅನಾಹುತ ಸಂಭವಿಸಿದ್ದು, ಬಾಳಿಲ ಗ್ರಾಮದ ಬೊಮ್ಮನಮಜಲು ಬಳಿ ಬೃಹದಾಕಾರದ ದೂಪದ ಮರ ರಸ್ತೆಗೆ ಬಿದ್ದು ಬಾಳಿಲ ಕಾಂಚೋಡು, ಬಾಳಿಲ ಕೋಟೆಮುಂಡುಗಾರು ರಸ್ತೆ ಬಂದ್ ಆಗಿರುವುದಲ್ಲದೆ, 7 ವಿದ್ಯುತ್ ಕಂಬಗಳು ಧರೆಗುರುಳಿದೆ. ಇಂದು ಬೆಳಿಗ್ಗೆ ಮರ ತೆರವು ಕಾರ್ಯ ಆರಂಭವಾಗಿರುವುದಾಗಿ ತಿಳಿದುಬಂದಿದೆ. ಇದರೊಂದಿಗೆ ಡಾ. ಶ್ರೇಯಸ್ ಬಾರಧ್ವಾಜರ ತೋಟದ ಹಲವು ಅಡಿಕೆ ಮರಗಳೂ ತುಂಡಾಗಿ ಬಿದ್ದಿರುವುದಾಗಿ ತಿಳಿದುಬಂದಿದೆ.