ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷರಾದ ಗುರುರಾಜ್ ಅಜ್ಜಾವರರವರು ಸಾಧಾನಾಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜು.27ರಂದು ಜೇಸಿಐ ಮಡoತ್ಯಾರಿನ ಅತಿಥ್ಯದಲ್ಲಿ ನಡೆದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳನ್ನೊಳಗೊಂಡ ವಲಯ 15 ರ ವ್ಯವಹಾರ ಸಮ್ಮೇಳನ ಮೃದಂಗದಲ್ಲಿ ಸಾಧಕ ಜೇಸಿಗಳ ಸಾಧನೆಯ ತರಂಗ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.















ಈ ಸಂದರ್ಭದಲ್ಲಿ ಸುಳ್ಯ ಪಯಸ್ವಿನಿಯ ಅಧ್ಯಕ್ಷರಾದ ಜೇಸಿ ಸುರೇಶ್ ಕಾಮತ್, ಕೋಶಾಧಿಕಾರಿ ಜೇಸಿ ಶಶ್ಮಿ ಭಟ್ ಅಜ್ಜಾವರ, ಜೇಸಿ ಅಕ್ಷತ್ ಕುಮಾರ್ ಅಜ್ಜಾವರ ಉಪಸ್ಥಿತರಿದ್ದರು.
ಗುರುರಾಜ್ ಅಜ್ಜಾವರ ರವರು ಅಜ್ಜಾವರ ಗ್ರಾಮದ ದಿ.ಅಪ್ಪಯ್ಯ ಹಾಗೂ ಮೀನಾಕ್ಷಿ ದಂಪತಿಗಳ ಪುತ್ರ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಅವರು ಅಲ್ಲಿ ಕೆಲಸ ಬಿಟ್ಟು ಊರಿಗೆ ಬಂದು ಕೃಷಿ ಹಾಗೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜತೆಗೆ ಕರ್ನಾಟಕ ಹಾಲು ಒಕ್ಕೂಟದ ಮುಖಾಂತರ ಆರ್ಟಿಫಿಶಿಯಲ್ ಇನ್ಸಾಮಿನೇಷನ್ ತರಬೇತಿಯನ್ನು ಪಡೆದು ಸುಮಾರು ಹತ್ತು ವರ್ಷದಿಂದ ಪಶುಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅಜ್ಜಾವರ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಸುಳ್ಯ ಪಯಸ್ವಿನಿ ಘಟಕ ಅಧ್ಯಕ್ಷರಾಗಿ, ಸಂಯೋಜಕರಾಗಿ ದುಡಿದಿರುವ ಇವರು ಅಜ್ಜಾವರ ಪ್ರತಾಪ ಯುವಕ ಮಂಡಲದ ಅಧ್ಯಕ್ಷರಾಗಿ, ಯುವಜನ ಸಂಯುಕ್ತ ಮಂಡಳಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಗುರುರಾಜರ ಪತ್ನಿ ಶ್ರೀಮತಿ ಗೀತಾಂಜಲಿ ಮೆಸ್ಕಾಂ ಉದ್ಯೋಗಿಯಾಗಿದ್ದಾರೆ. ಮಕ್ಕಳಾದ ಕು.ಧರಿತ್ರಿ, ಧವನ್ ರಾಜ್ ವಿದ್ಯಾರ್ಥಿ ಗಳಾಗಿದ್ದಾರೆ










