ಜಯನಗರ ಜನ್ನತುಲ್ ಉಲೂಮ್ ಮಸ್ಜಿದ್ ಮತ್ತು ಮದ್ರಸಾ ಸಮಿತಿ ವತಿಯಿಂದ ಆಚರಿಸಿಕೊಂಡು ಬರುವ ಮಾಸಿಕ ಅಜ್ಮೀರ್ ಮೌಲೂದ್ ಕಾರ್ಯಕ್ರಮ ಜುಲೈ 27ರಂದು ಜಯನಗರ ಮಸ್ಜಿದ್ ನಲ್ಲಿ ನಡೆಯಿತು.















ಈ ಕಾರ್ಯಕ್ರಮದಲ್ಲಿ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ರವರ ಅನುಸ್ಮರಣೆ ಹಾಗೂ ಪ್ರಭಾಷಣ ನಡೆಯಿತು.
ಲತೀಫ್ ಜೌಹರಿ ಉಸ್ತಾದ್ ಮೇನಾಲರವರು ಅನುಷ್ಮರಣಾ ಪ್ರಭಾಷಣವನ್ನು ಮಾಡಿ ಸಯ್ಯಿದ್ ಕೂರತ್ ತಂಙಳ್ ರವರ ಬಗ್ಗೆ ಸಂದೇಶವನ್ನು ನೀಡಿದರು.

ಈ ಸಂದರ್ಭದಲ್ಲಿ ಜಯನಗರ ಮಸ್ಜಿದ್ ಮತ್ತು ಮದರಸ ಸಮಿತಿಯ ಅಧ್ಯಕ್ಷ ಹನೀಫ್ ಜಯನಗರ,ಪ್ರಧಾನ ಕಾರ್ಯದರ್ಶಿ ಶರೀಫ್ ಹಾಗೂ ಪದಾಧಿಕಾರಿಗಳು ಸದಸ್ಯರುಗಳು ಊರಿನ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.
ಸಯ್ಯದ್ ಜೈನುಲ್ ಆಬಿದೀನ್ ತಂಙಳ್ ಜಯನಗರ ದುವಾ ನೇತೃತ್ವವನ್ನು ನೀಡಿದರು.
ಮೌಲೂದ್ ಪಾರಾಯಣದ ನೇತೃತ್ವವನ್ನು ವಹಿಸಿದ್ದ ಸ್ಥಳೀಯ ಸದರ್ ಮುಅಲ್ಲಿಮ್ ಶಫೀಕ್ ಹಿಮಮಿ ಸಖಾಫಿ ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಸಿದರು.ಅಶ್ರಫ್ ಅಂಜುಮಿ ಉಸ್ತಾದ್ ರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಸೀರಣಿ ವಿತರಣೆ ನಡೆಯಿತು.










