ಜು. 29 (ನಾಳೆ) ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ, ಸಾಮೂಹಿಕ ಅಶ್ಲೇಷ ಬಲಿ

0

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜು.29 ರಂದು ನಾಗರ ಪಂಚಮಿ ಪ್ರಯುಕ್ತ ಸಾಮೂಹಿಕ ಅಶ್ಲೇಷ ಬಲಿ ಪೂಜೆ (ಹೋಮ ಸಹಿತ)ನಡೆಯಲಿದೆ.
ನಾಗತಂಬಿಲ, ಬಲಿವಾಡು ಕೂಟವು ಜರಗಲಿರುವುದು. ಆಶ್ಲೇಷ ಬಲಿ ಮಾಡಿಸುವವರು ರೂ. 100 ಹಾಗೂ ನಾಗನಿಗೆ ಕ್ಷೀರಾಭಿಷೇಕ ಮಾಡಿಸುವವರು ರೂ.20 ಮತ್ತು ನಾಗತಂಬಿಲ ಮಾಡಿಸುವವರು ರೂ. 70ನ್ನು ತೆತ್ತು ಸೇವೆ ಮಾಡಿಸಿ ಬೆಳಗ್ಗೆ 11:00ಗಂಟೆ ಒಳಗೆ ಸಂಕಲ್ಪ ಮಾಡಿಸಬೇಕಾಗಿ ಕೇಳಿಕೊಳ್ಳಲಾಗಿದೆ.