ಮಡಂತ್ಯಾರ್ ನಲ್ಲಿ ನಡೆದ ಜೆಸಿಐ ವಲಯ ವ್ಯವಹಾರ ಸಮ್ಮೇಳನದಲ್ಲಿ ವೃತ್ತಿ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಕಳಂಜ ಗ್ರಾಮದ ಕಿಲoಗೋಡಿಯ ವಾಸುದೇವ ಆಚಾರ್ ಟಿ ಅವರಿಗೆ ವಲಯ ಸಾಧನಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.















ಜೆಸಿಐ ವಲಯಾಧ್ಯಕ್ಷ ಅಭಿಲಾಷ್ ಬಿ ಎ ಪ್ರಶಸ್ತಿ ಪ್ರದಾನ ಮಾಡಿದರು. ಪೂರ್ವ ವಲಯಾಧ್ಯಕ್ಷ ಸಂಪತ್ ಸುವರ್ಣ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೆಳ್ಳಾರೆ ಜೆಸಿಐನ ಸ್ಥಾಪಕ ಸದಸ್ಯರಾಗಿರುವ ವಾಸುದೇವ ಆಚಾರ್ಯ ಅವರು
ಕೇರಳದ ವಾಸ್ತುಶಿಲ್ಪಿ ತಂಬಾನ್ ಎಳೆಯಚಾರಿಯವರೊಂದಿಗೆ ವಾಸ್ತುಶಿಲ್ಪದ ಅಭ್ಯಾಸ ಮಾಡಿ ವಾಸ್ತುಶಿಲ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅನೇಕ ತರವಾಡು ಮನೆ, ದೈವಸ್ಥಾನಗಳು, ಮತ್ತು ದೇವಸ್ಥಾನಗಳ ನಿರ್ಮಾಣ ಕಾರ್ಯಗಳನ್ನು ಮಾಡಿದ್ದಾರೆ.
ವರದಿ : ಉಮೇಶ್ ಮಣಿಕ್ಕಾರ










