ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿಗೆ ದಾಖಲಾತಿಗೊಂಡ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮವನ್ನು ಕಾಲೇಜಿನ ಐ.ಕ್ಯೂ.ಎ.ಸಿ ಘಟಕ ಮತ್ತು ದಾಖಲಾತಿ ಸಮಿತಿಯ ವತಿಯಿಂದ ಜು. 26ರಂದು ನಡೆಯಿತು.















ಈ ಕಾರ್ಯಕ್ರಮದಲ್ಲಿ ಕಡಬದ ಸರಕಾರಿ ಪಿ.ಯು ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕರಾದ ವಾಸುದೇವ ಗೌಡ ಕೆ ಇವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ ಪಿ.ಟಿ ಇವರು ವಹಿಸಿದ್ದರು, ವೇದಿಕೆಯಲ್ಲಿ ಐ.ಕ್ಯೂ.ಎ.ಸಿ ಘಟಕದ ಸಂಯೋಜಕಿ ಶ್ರೀಮತಿ ಲತಾ ಬಿ ಟಿ ಮತ್ತು ದಾಖಲಾತಿ ಸಮಿತಿಯ ಸಂಚಾಲಕಿ ಶ್ರೀಮತಿ ಶ್ರೀಲತಾ ಕಮಿಲ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರು ಹಾಗೂ ಪ್ರಥಮ ಪದವಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸಾದ ಎನ್ ಪ್ರಾಸ್ತವಿಕ ಮಾತುಗಳೊಂದಿಗೆ ಸ್ವಾಗತಿಸಿದರು.ವಾಣಿಜ್ಯ ಮತ್ತು ಉದ್ಯಮಾಡಳಿತ ವಿಭಾಗದ ಉಪನ್ಯಾಸಕಿಯಾದ ಶ್ರೀಮತಿ ಕೃತಿಕಾ ಪಿ ಎಸ್ ವಂದಿಸಿದರು, , ತೃತೀಯ ಬಿ. ಕಾಂ ನ .ಜೀವಿತ್ ಕಾರ್ಯಕ್ರಮ ನಿರೂಪಿಸಿದರು.










