ಗುತ್ತಿಗಾರು – ಮಾವಿನಕಟ್ಟೆಆಟಿದ ಕೂಟ ಮತ್ತು ಕ್ರೀಡಾಕೂಟ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸುಳ್ಯ ತಾಲೂಕು ಗುತ್ತಿಗಾರು ವಲಯದ ಮಾವಿನಕಟ್ಟೆ ಒಕ್ಕೂಟದಲ್ಲಿ ಆಟಿದ ಕೂಟ ಮತ್ತು ಕ್ರೀಡಾಕೂಟವು ಮಾವಿನ ಕಟ್ಟೆ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಸಭಾಭವನದಲ್ಲಿ ಆ10 ರಂದು ನಡೆಯಿತು.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನೇಜಿ ನೆಡುವುದರ ಮೂಲಕ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ಬಾಬು ಮಾಸ್ತರ್ ಅಚ್ರಪ್ಪಾಡಿಯವರು ಚಾಲನೆ ನೀಡಿ ಆಟಿ ತಿಂಗಳಲ್ಲಿ ನಡೆಸುವ ಆಟೋಟಗಳು ತಿಂಡಿ ತಿನಸುಗಳ ಬಗ್ಗೆ ಹಾಗೂ ಯೋಜನೆಯ ಸದಸ್ಯರಿಗೆ ಹಮ್ಮಿಕೊಂಡಿರುವ ಕಾರ್ಯಕ್ರಮದ ಬಗ್ಗೆ ಶ್ಲಾಘಿಸಿದರು.
ಸಭೆಯ ಅಧ್ಯಕ್ಷತೆಯನ್ನು ಮಾವಿನಕಟ್ಟೆ ಒಕ್ಕೂಟದ ಅಧ್ಯಕ್ಷ ಭಾನುಪ್ರಕಾಶ್ ತಳೂರು ವಹಿಸಿದ್ದರು.

ಮುಖ್ಯ ಅತಿಥಿಗಳ ನೆಲೆಯಲ್ಲಿ ತಾಲೂಕು ಯೋಜನಾಧಿಕಾರಿಗಳಾದ ಮಾಧವ ಗೌಡ ರವರು ಆಟಿ ತಿಂಗಳ ಮಹತ್ವ ಧಾರ್ಮಿಕ ಆಚಾರ ವಿಚಾರಗಳು ನಮ್ಮ ನಂಬಿಕೆ ಸಂಸ್ಕೃತಿ ಹಾಗೂ ಗ್ರಾಮಾಭಿವೃದ್ಧಿ ಬಗ್ಗೆ ವಿವರಿಸಿದರು.


ಗುತ್ತಿಗಾರು ವಲಯದ ಭಜನಾ ಪರಿಷತ್ತಿನ ಅಧ್ಯಕ್ಷರಾದ ಬಿ ಪೂರ್ಣಚಂದ್ರ ಬೊಮ್ಮದೇರೆ, – ಪೈಕ , ಪ್ರಗತಿಬಂಧು ಮತ್ತು ಸ್ವಸಹಾಯ ಸಂಘದ ಗುತ್ತಿಗಾರು ವಲಯದ ಒಕ್ಕೂಟದ ಅಧ್ಯಕ್ಷರಾದ ಯೋಗೀಶ ದೇವ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಘಗಳ ಸದಸ್ಯರ ಮಕ್ಕಳಿಗೆ ಸುಜ್ಞಾನ ನಿಧಿ ಶಿಷ್ಟ ವೇತನ ಮತ್ತು ವಿದ್ಯಾನಿಧಿಯನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿ ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು
ಸುಮಾರು 9 ವರ್ಷಗಳಿಂದ ನಿರಂತರವಾಗಿ ಸೇವಾಪ್ರತಿನಿಧಿಯಾಗಿ ಸೇವೆಗೈದ ಶ್ರೀಮತಿ ಉಷಾಲತರವರನ್ನು ಒಕ್ಕೂಟದ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಾರ್ಥನೆಯನ್ನು ಮಾಡಿದ ಕು. ಸಾನ್ವಿ ಹೆಚ್ ತಳೂರು ಮಾಡಿದರು. ಕಾರ್ಯಕ್ರಮದದಲ್ಲಿ ಪ್ರಾಸ್ತಾವಿಕವಾಗಿ ವಲಯದ ಮೇಲ್ವಿಚಾರಕರಾದ ರಾಜೇಶ್ ಟಿ ಮಾತನಾಡಿ ಸ್ವಾಗತಿಸಿದರು. ಗಿರೀಶ್ ಟಿ. ಪಿ. ಧನ್ಯವಾದವಿತ್ತರು. ಕಾರ್ಯಕ್ರಮದ ನಿರೂಪಣೆಯನ್ನು ಗುತ್ತಿಗಾರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಲೋಕೇಶ್ವರ ಡಿ. ಆರ್ ಮಾಡಿದರು.