ಕೇನ್ಯದಲ್ಲಿ ‘ಆಟಿಡೊಂಜಿ ದಿನ’ ಕಾರ್ಯಕ್ರಮ

0

ಶ್ರೀ ದುರ್ಗಾಮಹಿಳಾ ಮಂಡಲ, ಕೇನ್ಯ
ಇದರ ಆಶ್ರಯದಲ್ಲಿ ಆ.13 ರಂದು “ಆಟಿಡೊಂಜಿ ದಿನ ” ಕಾರ್ಯಕ್ರಮ ಕೇನ್ಯ ಅಂಗನವಾಡಿಯಲ್ಲಿ ನಡೆಯಿತು. ವೇದಿಕೆ ಯಲ್ಲಿ ಸಭಾಧ್ಯಕ್ಷತೆಯನ್ನು ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ತಾರಾ ಬಿ ರೈ ವಹಿಸಿದ್ದರು.

ಅತಿಥಿಗಳಾಗಿ ಕೇನ್ಯ ಪ್ರಾಥಮಿಕ ಆರೋಗ್ಯ ಸುರಕ್ಷಧಿಕಾರಿ ಕವಿತಾ ಹಾಗೂ ಸಮುದಾಯ ಆರೋಗ್ಯ ಅಧಿಕಾರಿ ಪೃಥ್ವಿ ಮತ್ತು ಹಿರಿಯರಾದ ಚಿತ್ರಾ ಸಿ ಮಾರ್ಲ ವೇದಿಕೆಯಲ್ಲಿದ್ದರು . ಅಂಗನವಾಡಿ ಕಾರ್ಯಕರ್ತೆ ಸ್ವಾಗತ ದೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಮಂಡಲ ಕಾರ್ಯದರ್ಶಿ ಸ್ವಾತಿಕಾ ನರಿಯಂಗ ವಂದಿಸಿದರು .
ಬಳಿಕ ಎಲ್ಲರೂ ತಂದಿರುವ ಆಟಿಯ ವಿಶೇಷ ಖಾದ್ಯಗಳನ್ನು ಸವಿಯಲಾಯಿತು