ಸಂಪಾಜೆ ಚೌಕಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಚರಂಡಿಗೆ

0

ಸಂಪಾಜೆಯ ಚೌಕಿ ಬಳಿ ಟಾಟಾ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಚರಂಡಿಗೆ ಇಳಿದ ಘಟನೆ ಆ.14 ರಂದು ನಡೆದಿದೆ.

ಮಂಗಳೂರಿನಿಂದ ಸಿದ್ದಾಪುರಕ್ಕೆ ಕೃಷಿ ಗೊಬ್ಬರ ಹೊತ್ತೊಯ್ಯುತ್ತಿದ್ದ ಲಾರಿ ಸಂಪಾಜೆಯ ಚೌಕಿಯ ಬಳಿ ತಲುಪಿದಾಗ ಒಮ್ಮಿಂದೊಮ್ಮೆಲೆ ಚಾಲನಕ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಚರಂಡಿಗೆ ಇಳಿದಿದೆ. ಪರಿಣಾಮವಾಗಿ ಲಾರಿಯ ಚಕ್ರ ಸಂಪೂರ್ಣ ಕೆಸರಿನಲ್ಲಿ ಹೂತು ಹೋಗಿದೆ. ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ.