















ಮಂಡೆಕೋಲು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕಿಯಾಗಿದ್ದು ಪುತ್ಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಡೆಪ್ಯುಟೇಷನ್ ಮೇಲೆ ಸೇವೆಯಲ್ಲಿದ್ದ ನಿವೃತ್ತ ಶಿಕ್ಷಕಿ ಲಕ್ಷ್ಮಿ ಬಿ.ಎಸ್ ರವರಿಗೆ ಬೀಳ್ಕೊಡುವ ಕಾರ್ಯಕ್ರಮ, ತ್ರಯೀ ಕ್ರಿಯೇಷನ್ಸ್ ಮೈಸೂರು ಇವರ ವತಿಯಿಂದ ಉಚಿತ ಸಮವಸ್ತ್ರ ವಿತರಣೆ ಹಾಗೂ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮವು ಮಂಡೆಕೋಲು ಶಾಲೆಯಲ್ಲಿ ಅ.09 ರಂದು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಚ ಸುರೇಶ್ ಕಣೆಮರಡ್ಕ ವಹಿಸಿದ್ದರು. ಕಾರ್ಯಕ್ರಮವನ್ನು ಶಿಕ್ಷಣ ಸಂಯೋಜಕರಾದ ಸಂಧ್ಯಾರವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜನಮೆಚ್ಚಿದ ಶಿಕ್ಷಕಿ ಪ್ರಶಸ್ತಿ ವಿಜೇತ ಇತ್ತೀಚೆಗೆ ನಿವರತ್ತರಾದ ಲಕ್ಷ್ಮಿ ಬಿ.ಎಸ್ ರವರನ್ನು ಶಾಲೆಯ ವತಿಯಿಂದ ಗೌರವಿಸುವ ಮೂಲಕ ಬೀಳ್ಕೊಡಲಾಯಿತು. ಸಮವಸ್ತ್ರ ವಿತರಣೆಯನ್ನು ತ್ರಯೀ ಕ್ರಿಯೇಷನ್ಸ್ ಮಾಲಕರಾದ ಕಿರಣ್ ಮೈಸೂರುರವರು ವಿತರಿಸಿದರು. ಸಾವಿತ್ರಿ ಕಣೆಮರಡ್ಕರವರು ಅಭಿನಂದನಾ ಭಾಷಣ ಮಾಡಿದರು. ವೇಧಿಕೆಯಲ್ಲಿ ಗ್ರಾ.ಪಂ ಸದಸ್ಯರಾದ ಬಾಲಚಂದ್ರ ದೇವರಗುಂಡ, ಪ್ರಶಾಂತಿ ಮಂಡೆಕೋಲು ಬೈಲು, ಪ್ರಣವ್ ಪೌಂಡೇಷನ್ ನಿರ್ದೇಶಕರಾದ ಮಹೇಶ್‌ಕುಮಾರ್ ಮೇನಾಲ, ಎಸ್ ಡಿ ಎಂ ಸಿ ಉಪಾಧ್ಯಕ್ಷ ಮುರಳೀಧರ ರೈ, ಶಾಲಾ ಮುಖ್ಯೋಪಾಧ್ಯಾಯನಿ ಮಂಜುಳಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಪೌಷ್ಠಕಾಂಶಯುಕ್ತ ಆಹಾರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಪೌಷ್ಠಿಕಾಂಶ ಆಹಾರದ ಮಹತ್ವದ ಬಗ್ಗೆ ಮಂಜುಳಾರವರು ಮಾಹಿತಿ ನೀಡಿದರು. ಮಧ್ಯಾಹ್ನ ವಿಧ್ಯಾರ್ಥಿಗಳಿಗೆ ಪೌಷ್ಠಕ ಆಹಾರದ ಭೋಜನ ವಿತರಿಸಲಾಯಿತು. ಶಾಲಾ ಸಹಶಿಕ್ಷಕಿ ವನಿತಾಕುಮಾರಿ ಸ್ವಾಗತಿಸಿ ಶಿಕ್ಷಕರಾದ ರಮೇಶ್ ವಂದಿಸಿದರು.
ಶಿಕ್ಷಕಿಯರಾದ ದಿವ್ಯಾ, ಚಶ್ಮಿತಾ ಹಾಗೂ ಪ್ರಮೀಳಾ ಕಾರ್ಯಕ್ರಮ ನಿರೂಪಿಸಿದರು.










