
ಚೊಕ್ಕಾಡಿ ವಿದ್ಯಾಸಂಸ್ಥೆಗಳು ಕುಕ್ಕುಜಡ್ಕದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆ.15ರಂದು ಆಚರಿಸಲಾಯಿತು. ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿ(ರಿ.) ಕುಕ್ಕುಜಡ್ಕ ಇದರ ಅಧ್ಯಕ್ಷರು, ಮಾಜಿ ಸಚಿವ ಎಸ್. ಅಂಗಾರ ಧ್ವಜಾರೋಹಣಗೈದು ಗಾಂಧೀಜಿ ಮತ್ತು ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
















ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ತೇಜಸ್ವಿ ಕಡಪಳ, ನಿರ್ದೇಶಕರಾದ ಆನಂದ ಚಿಲ್ಪಾರು, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ವಿಶ್ವನಾಥ ಮೂಕಮಲೆ ಉಪಸ್ಥಿತರಿದ್ದರು. ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ಮುಖ್ಯೋಪಾಧ್ಯಾಯರಾದ ಸಂಕೀರ್ಣ ಚೊಕ್ಕಾಡಿ ಸ್ವಾಗತಿಸಿದರು. ಚೊಕ್ಕಾಡಿ ಆಂಗ್ಲ ಮಾಧ್ಯಮ ಶಾಲೆ ಕುಕ್ಕುಜಡ್ಕದ ಮುಖ್ಯೋಪಾಧ್ಯಾಯಿನಿ ಭವ್ಯಾ, ಶಾಲಾ ಶಿಕ್ಷಕ ಮತ್ತು ಸಿಬ್ಬಂದಿ ವರ್ಗ, ವಿದ್ಯಾರ್ಥಿ ವೃಂದದವರು ಹಾಜರಿದ್ದರು.










