ಪೆರಾಜೆ ಪ್ರಾ ಕೃ ಪ ಸ ಸಂಘದಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪೆರಾಜೆ ಪ್ರಾ ಕೃ ಪ ಸಹಕಾರ ಸಂಘದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಸಂಘದ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ ಇವರು ನೆರವೇರಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲೋಕೇಶ್ ಹೆಚ್ ಕೆ ಎಲ್ಲರನ್ನೂ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಅಶೋಕ ಪೆರುಮುಂಡ, ನಿರ್ದೇಶಕರುಗಳಾದ ಜಯರಾಮ ಎನ್ ಬಿ ,ಧನಂಜಯ ಕೆ ವಿ ,ಸೀತಾರಾಮ ಕದಿಕಡ್ಕ,ಪುಷ್ಪವತಿ ಯಾಪಾರೆ,ದೀನರಾಜ್ ಡಿ ಸಿ, ಜಯರಾಮ ಪಿ ಟಿ,ಪ್ರದೀಪ ಕೆ ಯಂ,ಶೇಷಪ್ಪ ಎನ್ ವಿ, ಮತ್ತು ಹಿರಿಯರಾದ ತೀರ್ಥರಾಮ ಹೊದ್ದೆಟ್ಟಿ, ಪದ್ಮಯ್ಯ ಕೆಎಸ್ ಹಾಗು ಸಂಘದ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಸಿಬ್ಬಂದಿ ರವಿಪ್ರಕಾಶ್ ಸಿ ಪಿ ನಿರೂಪಿಸಿದ ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಪ್ರಮೀಳಾ ಬಂಗಾರಕೋಡಿ ವಂದಿಸಿದರು.