ದ. ಕ. ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

0

ದ. ಕ. ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅಗಸ್ಟ್ 15 ರಂದು ಆಚರಿಸಲಾಯಿತು. ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ರವರು ನೆರವೇರಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಕುಮಾರ್ ಜೈನ್ ರವರು ಎಲ್ಲರನ್ನೂ ಸ್ವಾಗತಿಸಿದರು.


ಸಂಘದ ಉಪಾಧ್ಯಕ್ಷರಾದ ಯಮುನ ಬಿ ಎಸ್, ನಿರ್ದೇಶಕರಾದ ಗಣಪತಿ ಭಟ್, ಉಷಾ ಕೆಎಂ, ಜಗದೀಶ ರೈ, ಜಾನಿ ಕೆ ಪಿ, ಜಿ ಕೆ ಹಮೀದ್, ಜಗದೀಶ ಜಿ ವಿ, ಪ್ರಮೀಳ ಪೆಲತಡ್ಕ, ಮಹಮ್ಮದ್ ಕುಂಞಿ ಗೂನಡ್ಕ, ಅಬುಸಾಲಿ ಪಿ. ಕೆ, ಜಾನಶೀಲನ್, ಸದಸ್ಯರಾದ ರಾಜಗೋಪಾಲ್ ಉಳುವಾರು, ಮಂಜುನಾಥ ಕೆ, ನಾಗೇಶ್ ಪೆರಾಲ್, ಡಾಮಿನಿಕ್, ಕಾಂತಿ ಬಿ ಎಸ್, ಲಲನ , ಗ್ರಾಮ ಪಂಚಾಯತ್ ಸದಸ್ಯರು, ಆಟೋ ಚಾಲಕರು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು, ನಿರ್ದೇಶಕ ಜಾನಿ ಕೆ ಪಿ ರವರು ವಂದಿಸಿದರು. ಬಳಿಕ ಸಿಹಿ ತಿಂಡಿ ವಿತರಣೆ ನಡೆಯಿತು.