ಸರಸ್ವತಿ ಪುಲ್ಲಡ್ಕ ನಿಧನ

0

ಗುತ್ತಿಗಾರು ಗ್ರಾಮದ ಪುಲ್ಲಡ್ಕ ರಾಮಣ್ಣ ನಾಯ್ಕರ ಪತ್ನಿ ಶ್ರೀಮತಿ ಸರಸ್ವತಿ ಅಸೌಖ್ಯದಿಂದ ಆ. 16ರಂದು ಮಂಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ನಿಧನರಾದರು.

ಇವರಿಗೆ 50 ವರ್ಷ ವಯಸ್ಸಾಗಿತ್ತು. ಸರಸ್ವತಿಯವರು ಕೆಲವು ದಿನಗಳ ಹಿಂದೆ ತಮ್ಮ ತಾಯಿಯ ಆರೈಕೆಗಾಗಿ ಬಾಳೆಗುಡ್ಡೆಯ ತವರು ಮನೆಗೆ ಬಂದಿದ್ದರು. ಅಲ್ಲಿ ಬಿದ್ದರೆನ್ನಲಾಗಿದೆ. ಅಲ್ಲಿ ಅಸ್ವಸ್ಥರಾದ ಅವರನ್ನು ಜು. 28ರಂದು ಮಂಗಳೂರಿನ ಜಿಲ್ಲಾಸ್ಪತ್ರೆಗೆ ದಾಖಲಾಗಿತ್ತು.

ಅಲ್ಲಿ ಅವರಿಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮೃತರು ಪತಿ ರಾಮಣ್ಣ ನಾಯ್ಕ ಪುಲ್ಲಡ್ಕ, ಪುತ್ರಿಯರಾದ ಕು. ದೀಕ್ಷಾ ಮತ್ತು ಕು. ಲೀಕ್ಷಾ, ಸಹೋದರರಾದ ಜಯಪ್ರಕಾಶ್ ಬಾಳೆಗುಡ್ಡೆ, ಶಿವಪ್ರಸಾದ್ ಬಾಳೆಗುಡ್ಡೆ ಮತ್ತು ಡಾ. ಸಂದೀಪ್ ಬಾಳೆಗುಡ್ಡೆಯವರನ್ನು ಅಗಲಿದ್ದಾರೆ.