ಸಂಪಾಜೆಯ ಶ್ರೀ ವಿಷ್ಣು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಇಲ್ಲಿ ಎಸ್.ಸಿ. ಸದಸ್ಯರುಗಳಿಗೆ ೫ ದಿನಗಳ ಕಾಲ ನಡೆದ ಮೀನು ಸಾಕಾಣಿಕೆ ಮತ್ತು ಮೀನಿನ ಮೌಲ್ಯವರ್ಧಿತ ಉತ್ಪನ್ನಗಳ ತರಬೇತಿ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮ ಆ. ೧೬ರಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ದೇವಕಿಯವರು ವಹಿಸಿದ್ದರು.









ವೇದಿಕೆಯಲ್ಲಿ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು ಉಪಾಧ್ಯಕ್ಷರಾದ ಹನೀಫ್ ಎಸ್. ಕೆ., ಸದಸ್ಯರಾದ ಸುಂದರಿ ಮುಂಡಡ್ಕ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ವೇತಾ, ಸೊಸೈಟಿ ಉಪಾಧ್ಯಕ್ಷರಾದ ಯಮುನಾ ಬಿ ಎಸ್, ಒಕ್ಕೂಟದ ಕಾರ್ಯದರ್ಶಿ ಲಲನ ಕೆ. ಆರ್., ಮೀನುಗಾರಿಕಾ ಇಲಾಖೆಯ ಡೈರೆಕ್ಟರ್ ಸುಬ್ರಮಣ್ಯ , ಎಲ್. ಸಿ ಆರ್. ಪಿ. ಭಾರತಿ ಎ. ವಿ. ಪಶುಸಖಿ ಮಾಲತಿ ಉಪಸ್ಥಿತರಿದ್ದರು. ಶಿಬಿರಾರ್ಥಿಗಳಾದ ಸೌಮ್ಯ, ಮತ್ತು ಹರಿಣಾಕ್ಷಿ ಪ್ರಾರ್ಥನೆ ಮಾಡಿ ಎಂ. ಬಿ. ಕೆ ಕಾಂತಿ ಸ್ವಾಗತಿಸಿದರು. ಅತಿಥಿಗಳ ಶುಭಾಶಯಗಳ ಬಳಿಕ ಶಿಭಾರಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು. ಬಳಿಕ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಯಿತು. ಎಲ್ ಸಿ ಆರ್ ಪಿ ಸೌಮ್ಯಕುಮಾರಿ ಧನ್ಯವಾದ ಮಾಡಿದರು.










