ವಾಹನ ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಬೆಳ್ಳಾರೆ ಪೊಲೀಸರು
ಐವರ್ನಾಡಿನಲ್ಲಿ ನಿಲ್ಲಿಸಿದ್ದ ಪಿಕಪ್ ವಾಹನವೊಂದು ಇತ್ತೀಚೆಗೆ ಕಳವಾಗಿದ್ದು ಕಾರ್ಕಳದಲ್ಲಿ ಪತ್ತೆಯಾದ ಘಟನೆ ಆ.19 ರಂದು ನಡೆದಿದೆ.















ಎನ್.ಎಸ್.ಸೌಂಡ್ಸ್ & ಲೈಟಿಂಗ್ಸ್,ಶಾಮಿಯಾನ ಅಂಗಡಿ ಮಾಲಕ ಸುನಿಲ್ ನಿಡ್ಡಾಜೆಯವರು ಆ.11 ರಂದು ತನ್ನ ಅಂಗಡಿ ಎದುರು ನಿಲ್ಲಿಸಿದ್ದ ಪಿಕಪ್ ಕಾಣೆಯಾಗಿತ್ತು.
ಈ ಬಗ್ಗೆ ಅವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಬೆಳ್ಳಾರೆ ಪೊಲೀಸರು ಮುಖ್ಯ ರಸ್ತೆಯಲ್ಲಿರುವ ಸಿ.ಸಿ.ಕೆಮರಾಗಳನ್ನು ಪರಿಶೀಲಿಸಿದ್ದರು.
ಇಂದು ಕಾರ್ಕಳ ತಾಲೂಕಿನ ಮುಡ್ಕೂರು ಎಂಬಲ್ಲಿ ಪಿಕಪ್ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ಹೆಚ್ಚಿನ ಮಾಹಿತಿ ತಿಳಿದುಬರಬೇಕಷ್ಟೆ.










