ಶ್ರೀ ದುರ್ಗಾ ಮಹಿಳಾ ಮಂಡಲ (ರಿ. ) ಕೂತ್ಕುಂಜ, ಶ್ರೀದೇವಿ ಸಂಜೀವಿನಿ ಸಂಘ ಚಿದ್ಗಲ್, ಧರ್ಮಶ್ರೀ ನವೋದಯ ಸಂಘ ಚಿದ್ಗಲ್ , ಧನುಶ್ರೀ ನವೋದಯ ಸಂಘ ಚಿದ್ಗಲ್, ದುರ್ಗಾಶ್ರೀ ರೈತ ಸಂಘ ಚಿದ್ಗಲ್ ಇವುಗಳ ಜಂಟಿ ಆಶ್ರಯದಲ್ಲಿ ಆಟಿ ಉತ್ಸವ, ಸನ್ಮಾನ ಕಾರ್ಯಕ್ರಮ ಹಾಗೂ ಸ್ವಾತಂತ್ರ್ಯ ಉತ್ಸವ ಕಾರ್ಯಕ್ರಮ ಚಂದ್ರಾವತಿ ಹೊನ್ನಪ್ಪ ಚಿದ್ಗಲ್ ರವರ ನಿವಾಸದಲ್ಲಿ ನೆರವೇರಿಸಲಾಯಿತು.
ಕಾರ್ಯಕ್ರಮವನ್ನು ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮಿ ಜಳಕದಹೊಳೆ ಯವರು ಉದ್ಘಾಟಿಸಿದರು. ಅತಿಥಿಗಳಾಗಿ ಹೊನ್ನಪ್ಪ ಗೌಡ ಚಿದ್ಗಲ್ ರವರು ಉಪಸ್ಥಿತರಿದ್ದರು. ಶ್ರೀ ದುರ್ಗಾ ಮಹಿಳಾ ಮಂಡಲದ ಅಧ್ಯಕ್ಷೆ ದೇವಕಿ ಧರ್ಮಪಾಲ ಚಿದ್ಗಲ್ ರವರು ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮಂಡಲ ಸಂಘಟನೆ ಹಾಗೂ ಸಂಜೀವಿನಿ ಸಂಘ, ನವೋದಯ ಸಂಘ ಚಿದ್ಗಲ್ ಇದರ ಅಧ್ಯಕ್ಷೆ ಚಂದ್ರಾವತಿ ಹೊನ್ನಪ್ಪ ಚಿದ್ಗಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು .
















ಹೇಮಾ ವಸಂತ್ ಚಿದ್ಗಲ್ ( ಅಧ್ಯಕ್ಷರು, ಧನುಶ್ರೀ ನವೋದಯ ಸಂಘ ಚಿದ್ಗಲ್ ) ಹಾಗೂ ಚಂದ್ರಾವತಿ ಭಾಸ್ಕರ ಚಿದ್ಗಲ್ ( ಅಧ್ಯಕ್ಷರು, ದುರ್ಗಾ ಶ್ರೀ ರೈತ ಸಂಘ ಚಿದ್ಗಲ್ ) ಉಪಸ್ಥಿತರಿದಗದರು.
ಭೂ ಸೇನೆಯ ನಿವೃತ್ತ ಕಮಿಷನ್ಡ್ ಆಫೀಸರ್ ಗಿರೀಶ್ ಆರ್ನೋಜಿ ಹಾಗೂ ಯಕ್ಷಗಾನ ಭಾಗವತೆ, ಶ್ರವಣ ಸ್ವರ ಪ್ರಶಸ್ತಿ ಪಡೆದ ರಚನಾ ಚಿದ್ಗಲ್ ಅವರನ್ನು ಸನ್ಮಾನಿಸಲಾಯಿತು. ಹೊನ್ನಪ್ಪ ಚಿದ್ಗಲ್ ಸನ್ಮಾನ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಪದ್ಮಾವತಿ ಚಿನ್ನಪ್ಪ ಪ್ರಾರ್ಥಿಸಿದರು . ಚಂದ್ರಾವತಿ ಹೊನ್ನಪ್ಪ ಚಿದ್ಗಲ್ ಸ್ವಾಗತಿಸಿದರು. ಹೇಮಾ ವಸಂತ್ ಚಿದ್ಗಲ್ ಕಾರ್ಯಕ್ರಮ ನಿರೂಪಿಸಿದರು . ವೀಣಾ ಗಿರಿಧರ್ ಇಟ್ಯಡ್ಕ ವಂದಿಸಿದರು.
ಚೆನ್ನೆಮಣೆ , ಎಕ್ಕಟಿ ಸ್ಪರ್ಧೆ, ಹಾಗೂ ಇನ್ನಿತರ ಸ್ಪರ್ಧೆ ಗಳನ್ನು ಆಯೋಜಿಸಿ ಬಹುಮಾನಗಳನ್ನು ವಿತರಿಸಲಾಯಿತು. ಬಾಲಕೃಷ್ಣ ಬಿಳಿಮಲೆ ಹಾಗೂ ಬಂಧುಗಳು ಮತ್ತು ಭೋಜನದ ವ್ಯವಸ್ಥೆ ಯಲ್ಲಿ ಸಹಕರಿಸಿದರು .










