














ಸುಳ್ಯ ತಾಲೂಕು ಮೊಗೇರ ಸಂಘ ಹಾಗೂ ಕರ್ನಾಟಕ ರಾಜ್ಯ ಸಂಘದ ಪದಾಧಿಕಾರಿಯಾಗಿದ್ದ, ನಿವೃತ್ತ ಬ್ಯಾಂಕ್ ಉದ್ಯೋಗಿ ಕೃಷ್ಣಪ್ಪ ಪಲ್ಲತ್ತಡ್ಕರವರು ಇಂದು ಬೆಳಿಗ್ಗೆ ಮಂಗಳೂರಿನಲ್ಲಿ ನಿಧನರಾದರು.
ಮೃತದೇಹವನ್ನು ಸುಳ್ಯದ ಪಲ್ಲತ್ತಡ್ಕ ಮನೆಗೆ ತಂದು ಅಂತಿಮ ದರ್ಶನದ ಬಳಿಕ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಮೃತರ ಕುಟುಂಬದವರು ತಿಳಿಸಿದ್ದಾರೆ.










