ಮುರುಳ್ಯ: ಕೆರೆಗೆ ಬಿದ್ದ ಕೊರಗ ದಾಸರನ್ನು ರಕ್ಷಿಸಿ ಸಾಮರಸ್ಯ ಮೆರೆದ ಸೋದರ ಧರ್ಮೀಯರು

0

ಮುರುಳ್ಯದಲ್ಲಿ ಶಾಸಕಿ ಭಾಗೀರಥಿ ಅವರ ಸೋದರ ಸಂಬಂಧಿ ಕೊರಗದಾಸ ಎಂಬವರು ಆ. 24 ರ ತಡ ರಾತ್ರಿ ಬಾವಿಗೆ ಬಿದ್ದು ಅವರು ಕಿರುಚುವುದನ್ನು ಕೇಳಿ ಸ್ಥಳೀಯ ಮುಸ್ಲಿಂ ಬಾಂಧವರು ಅವರನ್ನು ರಕ್ಷಿಸಿದ ಘಟನೆ ವರದಿಯಾಗಿದೆ.

ಕೊರಗದಾಸ ಎಂಬವರು ರಾತ್ರಿ 12 ಗಂಟೆ ಸುಮಾರಿಗೆ ಮನೆ ಪಕ್ಕದ ಬಾವಿಗೆ ಬಿದ್ದರು. ಬಾವಿಯಿಂದ ಕಿರುಚುವುದನ್ನು ಕೇಳಿದ ಸ್ಥಳೀಯರಾದ ಮಾಜಿ ಗ್ರಾ.ಪಂ.ಸದಸ್ಯ ಪಿ.ಎಂ.ಅಬ್ದುಲ್ ರೆಹಮಾನ್ ರವರು ಸ್ಥಳಕ್ಕೆ ತೆರಳಿದರು. ವಿಷಯ ಅರಿತ ಅವರು ನೌಫಾಲ್, ಆಸಿಫ್, ಸೈಫುದ್ದೀನ್, ಶೀನ ಅವರೆಲ್ಲರನ್ನು ಸೇರಿಸಿ ಕೊರಗದಾಸರನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ.

ಈ ಸಂಬಂಧ ರಾತ್ರಿಯೇ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ತಿಳಿಸಲು ಕರೆ ಮಾಡಿದಾಗ ಅವರು ಬೆಂಗಳೂರಿಗೆ ಹೋಗುತ್ತಿದ್ದುದರಿಂದ
ಕರೆ ಸ್ವೀಕರಿಸಲಾಗಲಿಲ್ಲವೆನ್ನಲಾಗಿದೆ. ಕೊರಗದಾಸ ಅವರು ಶಾಸಕಿಯವರ ದೊಡ್ಡಪ್ಪ ಅವರ ಮಗನಾಗಿದ್ದು ಸಹೋದರರಾಗಿರುತ್ತಾರೆ.