ಆರಂಬೂರು ಶ್ರೀ ಮೂಕಾಂಬಿಕಾ ಭಜನಾ ಮಂದಿರದಲ್ಲಿ ವರ್ಷಂಪ್ರತಿ ಜರುಗುವ 39 ನೇ ವರ್ಷದ ಶ್ರೀ ಗಣೇಶೋತ್ಸವವು ಆ. 27 ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಿತು.
ಬೆಳಗ್ಗೆ ಅರ್ಚಕರಾದ ಕೃಷ್ಣ ಭಟ್ ಮತ್ತು ಅಭಿರಾಮ್ ಭಟ್ ರವರ ನೇತೃತ್ವದಲ್ಲಿ ಗಣಪತಿ ಹವನವಾಗಿ ಗಣೇಶ ಮೂರ್ತಿ ಪ್ರತಿಷ್ಠೆಯಾಗಿ ಪೂಜೆಯು ನಡೆಯಿತು.















ಕೃಷ್ಣ ನಗರದಿಂದ ಗಣೇಶನ ಮೂರ್ತಿ ಮೆರವಣಿಗೆಯು ಕಾಲ್ನಡಿಗೆಯಲ್ಲಿ ಸಾಗಿ ಬಂತು. ಹಿರಿಯ ಉದ್ಯಮಿ ಕೃಷ್ಣ ಕಾಮತ್ ರವರು ಮೂರ್ತಿ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಭಜಕರಿಂದ ಭಜನಾ ಸಂಕೀರ್ತನೆಯು ನಡೆಯಿತು. ಮಧ್ಯಾಹ್ನ ವಿಶೇಷವಾಗಿ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಿ ಸಾರ್ವಜನಿಕಅನ್ನಸಂತರ್ಪಣೆಯಾಯಿತು.
ಈ ಸಂದರ್ಭದಲ್ಲಿ ಗೌರವಧ್ಯಕ್ಷರಾದ ಬಿ. ಶ್ರೀಪತಿ ಭಟ್ ಮಜಿಗುಂಡಿ, ಅಧ್ಯಕ್ಷ ಪರಮೇಶ್ವರ ಎನ್. ಪಿ, ಉಪಾಧ್ಯಕ್ಷ ಕುಸುಮಾಧರ ಕುಲಾಲ್, ರಾಜೀವಿ ಆರಂಬೂರು, ಕಾರ್ಯದರ್ಶಿ ಜನಾರ್ಧನ ಸಿರಿಕುರಲ್, ಖಜಾಂಜಿ ಉಷಾ ಕರುಣಾಕರ ಪಾಲಡ್ಕ, ಪುಷ್ಪರಾಜ್ ಮಜಿಗುಂಡಿ ಹಾಗೂ ನಿರ್ದೇಶಕರು ಮತ್ತು ಸದಸ್ಯರು ಹಾಗೂ ಸ್ಥಳೀಯ ಭಕ್ತಾದಿಗಳು ಭಾಗವಹಿಸಿದರು.










