ಪೊಲೀಸರಿಂದ ಮೈಕ್ ಬಂದ್ ಮಾಡುವಂತೆ ಖಡಕ್ ಸೂಚನೆ- ಅರ್ಧಕ್ಕೆ ನಿಂತ ನಾಟಕ ಪ್ರದರ್ಶನ
ಕುಕ್ಕುಜಡ್ಕದ ಸಾರ್ವಜನಿಕ
ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಕುಕ್ಕುಜಡ್ಕ ಶಾಲೆಯ ಮೈದಾನದಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಗಣೇಶೋತ್ಸವದ ಸಂಧರ್ಭದಲ್ಲಿ ಇಲಾಖೆಯು ನಿಗದಿ ಪಡಿಸಿದ ಸಮಯ ಮೀರಿ ಪ್ರದರ್ಶನವಾಗುತ್ತಿದ್ದ ನಾಟಕವನ್ನು ಅರ್ಧಕ್ಕೆ ನಿಲ್ಲಿಸುವಂತೆ ಪೊಲೀಸ್ ಇಲಾಖೆ ಸೂಚನೆ ನೀಡಿದ ಘಟನೆ ಆ.27 ರಂದು ವರದಿ ಯಾಗಿದೆ.
ರಾತ್ರಿ ಗಂಟೆ 8.30 ರಿಂದ ನಾಟಕ ಪ್ರದರ್ಶನ ಆರಂಭವಾಗಿದ್ದು 10.00 ಗಂಟೆಯಾಗುತ್ತಲೇ ಬೆಳ್ಳಾರೆ ಪೊಲೀಸರು ದೂರವಾಣಿ ಮೂಲಕ ದ್ವನಿವರ್ಧಕ ನಿಲ್ಲಿ ಸುವಂತೆ ಸೂಚನೆ ನೀಡಿದರೆನ್ನಾಲಾಗಿದೆ.
ನಾಟಕದ ಕತೆ ಅರ್ಧ ಭಾಗದಷ್ಟು ಮಾತ್ರ ಮುಗಿದಿದ್ದು ಇಲಾಖೆಯ ಸೂಚಿಸಿದ ಸಮಯ ಮೀರಿ ಮುಂದುವರಿಸಿಕೊಂಡು ಹೋದರೆನ್ನಲಾಗಿದೆ.















ಸೂಚನೆ ನೀಡಿದ ನಂತರವು
ನಾಟಕ ಪ್ರದರ್ಶನ ನಡೆಯುತ್ತಿರುವ ಕುರಿತು ಮಾಹಿತಿ ತಿಳಿದ ಪೊಲೀಸರು ದ್ವನಿವರ್ಧಕದವರಿಗೆ ದೂರವಾಣಿ ಕರೆ ಮಾಡಿ ಮೈಕ್ ಆಫ್ ಮಾಡಿ ಇಲ್ಲವಾದರೆ ಸೀಜ್ ಮಾಡುತ್ತೇವೆ ಎಂದು ಖಡಕ್ ವಾರ್ನಿಂಗ್ ನೀಡಿರುತ್ತಾರೆ.
ಈ ಬಗ್ಗೆ ಸಂಘಟಕರಲ್ಲಿ ತಿಳಿ ಸಿದ ಮೇರೆಗೆ ಸಂಘಟಕರು ನಾಟಕ ನಿಲ್ಲಿಸುವುದಾಗಿ ಅನೌನ್ಸ್ ಮಾಡಿದರು.
ಕಿಕ್ಕಿರಿದು ಸೇರಿದ ಪ್ರೇಕ್ಷಕರು
ಆಸಕ್ತಿಯಿಂದ ನಾಟಕವನ್ನು ವೀಕ್ಷಿಸುತ್ತಿದ್ದು ನಿರಾಶೆಯಿಂದ ತೆರಳಿದರು ಎಂದು ತಿಳಿದು ಬಂದಿದೆ.










