ನಗರದ ಕುಡಿಯುವ ನೀರಿನ ಯೋಜನೆಗೆ ಬೇಕಾಗಿ ನಗರದ ಕಲ್ಲುಮುಟ್ಲು ವಾಟರ್ ಟ್ಯಾಂಕ್ ರಸ್ತೆಯನ್ನು ಪೈಪ್ಲೈನ್ ಕಾಮಗಾರಿಗೆ ಬೇಕಾಗಿ, ಕಾಂಕ್ರೀಟ್ ರಸ್ತೆಯನ್ನು ಅರ್ಧಕ್ಕಿಂತಲೂ ಹೆಚ್ಚು ಭಾಗ ಕತ್ತರಿಸಿ ಬೃಹತ್ ಗಾತ್ರದ ಪೈಪುಗಳನ್ನು ಅಳವಡಿಸಿದ ಗುತ್ತಿಗೆದಾರರು ರಸ್ತೆಯನ್ನು ಸರಿಪಡಿಸದೆ ಹಾಗೆಯೇ ಬಿಟ್ಟಿದ್ದಾರೆ. ಹಲವಾರು ತಿಂಗಳುಗಳಿಂದ ಈ ಭಾಗದ ಸುಮಾರು ೪೦ಕ್ಕಿಂತಲೂ ಹೆಚ್ಚು ಮನೆಯವರು ಈ ರಸ್ತೆ ಸಮಸ್ಯೆಯಿಂದಾಗಿ ಬವಣೆಯನ್ನು ಅನುಭವಿಸುತ್ತಿದ್ದು, ಈ ರಸ್ತೆಯಲ್ಲಿ ಆಟೋರಿಕ್ಷಾ ಕೂಡ ಸಂಚರಿಸಲು ಸಾಧ್ಯವಾಗದ೦ತಹ ಪರಿಸ್ಥಿತಿ ಎದುರಾಗಿದೆ. ಕೂಡಲೇ ನಗರ ಪಂಚಾಯತ್ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕಾಗಿದ್ದು ತಪ್ಪಿದ್ದಲ್ಲಿ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.















ಆದ್ದರಿಂದ ತಾವುಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ತ್ವರಿತವಾಗಿ ರಸ್ತೆಯನ್ನು ದುರಸ್ತಿಗೊಳಿಸಿ ಸಂಚಾರ ಯೋಗ್ಯವನ್ನಾಗಿ ಮಾಡಿಕೊಡಬೇಕೆಂದು ನಗರ ಪಂಚಾಯತ್ ಮುಖ್ಯ ಅಧಿಕಾರಿಗಳಿಗೆ ಎಸ್ಡಿಪಿಐ ಕಲ್ಲುಮುಟ್ಲು ವಾರ್ಡ್ ಸಮಿತಿಯಿಂದ ಮನವಿ ಸಲ್ಲಿಸಲಾಯಿತು. ನಿಯೋಗದಲ್ಲಿ ಅಬ್ದುಲ್ ರಹಮಾನ್ ಕಲ್ಲುಮುಟ್ಲು, ಸಮೀರ್ ಹೈಮಾ, ಶಾಫಿ ಆಟೋ ಉಪಸ್ಥಿತರಿದ್ದರು.










