Home Uncategorized ಸೆ.7: ಚಂದ್ರಗ್ರಹಣದ ನಿಮಿತ್ತ ಕುಕ್ಕೆ ದೇವಳದಲ್ಲಿ ದೇವರ ದರುಶನ ಹಾಗೂ ಸೇವೆಗಳಲ್ಲಿ ವ್ಯತ್ಯಯ

ಸೆ.7: ಚಂದ್ರಗ್ರಹಣದ ನಿಮಿತ್ತ ಕುಕ್ಕೆ ದೇವಳದಲ್ಲಿ ದೇವರ ದರುಶನ ಹಾಗೂ ಸೇವೆಗಳಲ್ಲಿ ವ್ಯತ್ಯಯ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೆ.
7 ರಂದು ಚಂದ್ರಗ್ರಹಣ ಇರುವುದರಿಂದ ಆ ದಿನ ಶ್ರೀ ದೇವಳದಲ್ಲಿ ದಿನ ನಿತ್ಯದ ಸೇವೆ ಮತ್ತು ದರುಶನ ಹಾಗೂ ಭಕ್ತಾದಿಗಳ ಸೇವಾ ಸಮಯಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಭಕ್ತರು ಸಹಕರಿಸಬೇಕು ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.
ಅಂದು ಮಧ್ಯಾಹ್ನ ಶ್ರೀ ದೇವರ ಮಧ್ಯಾಹ್ನದ ಮಹಾಪೂಜೆ ಯು ಬೆಳಗ್ಗೆ 11 ಗಂಟೆಗೆ ನಡೆಯಲಿದೆ.ರಾತ್ರಿಯ ಮಹಾಪೂಜೆಯು ಸಂಜೆ ಗಂಟೆ 5 ಕ್ಕೆ ನೆರವೇರಲಿದೆ. ಅಂದು ರಾತ್ರಿ ಭೋಜನ ಪ್ರಸಾದ ಇರುವುದಿಲ್ಲ.ಅಲ್ಲದೆ ಸಾಯಂಕಾಲದ ಆಶ್ಲೇಷ ಬಲಿ ಸೇವೆ ಇರುವುದಿಲ್ಲ.

ಸರ್ಪಸಂಸ್ಕಾರ ಆರಂಭ ಇಲ್ಲ:
ಆದಿತ್ಯವಾರ ಸರ್ಪಸಂಸ್ಕಾರ ಸೇವೆ ಆರಂಭವಾಗುವುದಿಲ್ಲ.ಶನಿವಾರ ಆರಂಭಗೊಂಡ ಸೇವೆಯು ಆದಿತ್ಯವಾರ ಕೊನೆಗೊಳ್ಳುತ್ತದೆ.ಆದರೆ ಆದಿತ್ಯವಾರ ಸೇವಾರಂಭ ಇಲ್ಲ. ಸಾಯಂಕಾಲ ಗಂಟೆ 5.00 ರಿಂದ ಶ್ರೀ ದೇವರ ದರುಶನ ಇರುವುದಿಲ್ಲ. ಸೆ. 08 ರಂದು ಪಂಚಾಮೃತ ಮಹಾಭಿಷೇಕ ಸೇವೆ ಇರುವುದಿಲ್ಲ. ಆದುದರಿಂದ ಭಕ್ತರು ಸಹಕರಿಸಬೇಕು ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.

NO COMMENTS

error: Content is protected !!
Breaking