ವಿದ್ಯಾರ್ಥಿಗಳ ಇಸ್ಲಾಮಿಕ್ ಕಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ









ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಮತ್ತು ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್ ನುಸ್ರತುಲ್ ಇಸ್ಲಾಂ ಮದರಸ ಅರಂತೋಡು ಇದರ ಜಂಟಿ ಆಶ್ರಯದಲ್ಲಿ ಈದ್ ಮಿಲಾದ್ ಕಾರ್ಯಕ್ರಮಕ್ಕೆ ಅರಂತೋಡು ಮಸೀದಿ ವಠಾರದಲ್ಲಿ ಚಾಲನೆ ನೀಡಲಾಯಿತು.ಅಧ್ಯಕ್ಷತೆಯನ್ನು ಬದ್ರಿಯಾ ಜುಮಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಅಶ್ರಫ್ ಗುಂಡಿ ವಹಿಸಿದರು.

ದುವಾ ಬದ್ರಿಯಾ ಜುಮಾ ಮಸೀದಿ ಖತೀಬ್ ಇಸ್ಮಾಯಿಲ್ ಫೈಝಿ ಗಟ್ಟೆಮನೆ ನೆರವೇರಿಸಿದರು.ವೇದಿಕೆಯಲ್ಲಿ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಮಜೀದ್ ,ಸದರ್ ಅಶ್ರಫ್ ಮುಸ್ಲಿಯಾರ್,ಮದರಸ ಮ್ಯಾನೇಜ್ಮೆಂಟ್ ಸಂಚಾಲಕ ಅಮೀರ್ ಕುಕ್ಕುಂಬಳ,ಜಮಾಅತ್ ಕಾರ್ಯದರ್ಶಿ ಮೂಸನ್,ಸೌದಿ ಅರೇಬಿಯಾ ಅಝೀಝ್ ಪೆಲ್ತಡ್ಕ,ಕೆ.ಎಂ.ಮಹಮ್ಮದ್ ಸ್ವಲಾತ್ ಸಮಿತಿ ಕೋಶಾಧಿಕಾರಿ ಅಬೂಬಕ್ಕರ್ ಪಾರೆಕ್ಕಲ್,ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಪಟೇಲ್,ಅನಿವಾಸಿ ಭಾರತೀಯ ಅನ್ವರ್, ಎ ಹೆಚ್ ವೈ ಎ ಪ್ರದಾನ ಕಾರ್ಯದರ್ಶಿ ಫಸಿಲು, ಆಶಿಕ್ ಕುಕ್ಕುಂಬಲ,ಸಂಶುದ್ದೀನ್ ಕೆಯು,ಸಹಾಯಕ ಅಧ್ಯಾಪಕ ಅಬ್ದುಲ್ ರಹಿಮಾನ್ ಕುಂಬ್ರ, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಜುಬೈರ್, ಉಪಸ್ಥಿತಿದ್ದರು. ಮಜೀದ್ ಸ್ವಾಗತಿಸಿದರು.










