
ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಸುಳ್ಯ, ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ, ಸುಳ್ಯ ತಾಲೂಕು, ಶ್ರೀ ಶಾರದಾಂಬಾ ಉತ್ಸವ ಸಮಿತಿ ಸುಳ್ಯ ಇದರ ವತಿಯಿಂದ ನಡೆಯುವ 54 ನೇ ವರ್ಷದ ಸುಳ್ಯ ದಸರಾ -2025 ಸೆ. 29ರಿಂದ ಅ. 7ರವರೆಗೆ ವಿಜೃಂಭೆಯಿಂದ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆಯು ಸೆ. ೬ರಂದು ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯಿತು.
















ಶಾರದಾಂಬಾ ಉತ್ಸವ ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್ ಅರಂಬೂರುರವರು ಆಮಂತ್ರಣವನ್ನು ಬಿಡುಗಡೆಗೊಳಿಸಿದರು. ದಸರಾ ಉತ್ಸವ ಸಮಿತಿಯ ಅಧ್ಯಕ್ಷೆ ಕು. ಭಾಗೀರಥಿ ಮುರುಳ್ಯ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿಯ ಗೌರವಾಧ್ಯಕ್ಷ ಗೋಕುಲ್‌ದಾಸ್, ಅಧ್ಯಕ್ಷ ನಾರಾಯಣ ಕೇಕಡ್ಕ, ಪ್ರಧಾನ ಕಾರ್ಯದರ್ಶಿ ರಾಜು ಪಂಡಿತ್, ಕೋಶಾಧಿಕಾರಿ ಅಶೋಕ ಪ್ರಭು, ಜೊತೆ ಕಾರ್ಯದರ್ಶಿ ಅನಿಲ್‌ಕುಮಾರ್ ಕೆ.ಸಿ., ಉಪಾಧ್ಯಕ್ಷರುಗಳಾದ ಯಶೋದಾ ರಾಮಚಂದ್ರ, ಲತಾ ಮಧುಸೂದನ್, ಹರೀಶ್ ರೈ ಉಬರಡ್ಕ, ಹೇಮಂತ್ ಕಾಮತ್, ಬೆಳ್ಯಪ್ಪ ಗೌಡ ಬಳ್ಳಡ್ಕ, ರಾಜೇಶ್ ಕುಮಾರ್ ನಾಯಕ್, ದಸರಾ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಖಜಾಂಜಿ ಸುನಿಲ್‌ಕುಮಾರ್ ಕೇರ್ಪಳ, ಗೌರವ ಸದಸ್ಯರಾದ ಹರೀಶ್ ಕಂಜಿಪಿಲಿ, ಸಂತೋಷ್ ಕುತ್ತಮೊಟ್ಟೆ, ಮಾಧ್ಯಮ ವಕ್ತಾರರಾದ ಕೃಷ್ಣ ಬೆಟ್ಟ, ಭವಾನಿಶಂಕರ ಕಲ್ಮಡ್ಕ, ಶಾರದಾಂಬಾ ಉತ್ಸವ ಸಮಿತಿ ಗೌರವ ಸಲಹೆಗಾರ ಎಂ. ವೆಂಕಪ್ಪ ಗೌಡ, ಶಾರದಾಂಬಾ ಮಹಿಳಾ ಸಮಿತಿ ಕಾರ್ಯದರ್ಶಿ ಶ್ವೇತಾ ಪ್ರಶಾಂತ್, ಜೊತೆ ಕಾರ್ಯದರ್ಶಿ ಲಕ್ಷ್ಮಿ ವಿ. ಶೆಟ್ಟಿ, ರೋಹಿಣಿ ಗಿರೀಶ್, ಉಪಾಧ್ಯಕ್ಷರಾದ ಜಯಕೃಷ್ಣ ಕಾಯರ್ತೋಡಿ, ಶಿಲ್ಪಾ ಸುದೇವ್, ಭಾರತಿ ಸದಾಶಿವ ಮತ್ತು ಗೌರವ ಸದಸ್ಯರುಗಳು, ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಯ ಗೌರವ ಸದಸ್ಯರುಗಳು, ಶ್ರೀ ಶಾರದಾಂಬಾ ಉತ್ಸವ ಸಮಿತಿಯ ಉಪಾಧ್ಯಕ್ಷರುಗಳು, ಶ್ರೀ ಶಾರದಾಂಬಾ ಮಹಿಳಾ ಸಮಿತಿಯ ಗೌರವ ಸದಸ್ಯರುಗಳು ಉಪಸ್ಥಿತರಿದ್ದರು.











