ಗಡಿ ಭದ್ರತಾ ಪಡೆಗೆ ಆಯ್ಕೆಗೊಂಡ ಸುಶ್ಮಿತಾಳಿಗೆ ಸುಳ್ಯದ ಡಿಗ್ರಿ ಕಾಲೇಜಿನಲ್ಲಿ ಸನ್ಮಾನ

0

ಸ್ಟಾಫ್ ಸೆಲೆಕ್ಷನ್ ಕಮಿಷನ್ ನಡೆಸುವ ಎಸ್ ಎಸ್ ಸಿ ಜಿ ಡಿ ಪರೀಕ್ಷೆಯಲ್ಲಿ ಗಡಿ ಭದ್ರತಾ ಪಡೆಗೆ ಆಯ್ಕೆಗೊಂಡ ಕಾಲೇಜಿನ ಹಿರಿಯ ವಿದ್ಯಾರ್ಥಿನಿ, ಆರಂತೋಡು ಮೇಲಡ್ತಲೆಯ ಸುಶ್ಮಿತಾಳಿಗೆ ಸುಳ್ಯದ ಡಿಗ್ರಿ ಕಾಲೇಜಿನಲ್ಲಿ ಸನ್ಮಾನ ಕಾರ್ಯಕ್ರಮ ವು ಸೆ -4 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾಲೇಜಿನ ಮ್ಯಾನೇಜ್ ಮೆಂಟ್ ವಿಭಾಗದ ವತಿಯಿಂದ ಈ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು. ಸನ್ಮಾನ ಕಾರ್ಯಕ್ರಮ ಕ್ಕೆ ಮೊದಲು ಸುಶ್ಮಿತಾ ಇವರು ಗಡಿ ಭದ್ರಾತ ಪಡೆಗೆ ಆಯ್ಕೆಯಾಗಲು ಮಾಡಿರುವ ಶ್ರಮದ ಬಗ್ಗೆ ಪರೀಕ್ಷೆಗಳಿಗೆ ನಡೆಸುವ ತಯಾರಿಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಎನ್ ಪಿ ವಹಿಸಿದ್ದರು. ವೇದಿಕೆಯಲ್ಲಿ ಐ ಕ್ಯೂ ಎ ಸಿ ಸಂಚಾಲಕರಾದ ಪ್ರೀತಿ ಕೆ ರಾವ್, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶೈಲಜಾ, ಉಪನ್ಯಾಸಕರಾದ ಶ್ರೀನಂದನ್ ಉಪಸ್ಥಿತರಿದ್ದರು. ಕಾರ್ಯಕ್ರಮ ದಲ್ಲಿ ದ್ವಿತೀಯ ಬಿ ಬಿ ಎ ದೀಪಕ್ ಸ್ವಾಗತಿಸಿ, ಪ್ರಥಮ ಬಿ ಬಿ ಎ ಭೂಮಿಕಾ ವಂದಿಸಿದರು. ಅಂತಿಮ ಬಿ ಬಿ ಎ ವಿಜಯ ಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.

ಸುಶ್ಮಿತಾ ಇದೆ ಕಾಲೇಜಿನಲ್ಲಿ ಬಿ ಬಿ ಎ ಪದವಿ ಶಿಕ್ಷಣ ಪೂರ್ಣಗೊಳಿಸಿದ್ದಾರೆ.