ಪ್ರಣವ್ ನೀರಬಿದಿರೆಗೂ ಪುರಸ್ಕಾರ
ಉಡುಪಿಯಲ್ಲಿ ಸೆ. 6ರಂದು ನಡೆದ ಪ್ರವೀಣ್ ಕುಮಾರ್ ಮೆಮೋರಿಯಲ್ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ ಶಿಪ್- 2025ರಲ್ಲಿ ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ ಕುನಾಲ್ ಎನ್.ಎಲ್. ನೀರಬಿದಿರೆ ಅವಳಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇನ್ ಸ್ಟಿಟ್ಯೂಟ್ ಆಫ್ ಕರಾಟೆ ಅಂಡ್ ಆರ್ಟ್ಸ್ ಮಲ್ಪೆ ಡೊಜೊ ವತಿಯಿಂದ ಉಡುಪಿಯ ಅಮೃತ ಗಾರ್ಡನ್ ನಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. 10 ವರ್ಷದ ಒಳಗಿನವರ ಕಟಾ ಹಾಗೂ ಕುಮಿಟೆ ಸ್ಪರ್ಧೆಯ ಎರಡೂ ವಿಭಾಗದಲ್ಲಿ ಕುನಾಲ್ ಪ್ರಥಮ ಸ್ಥಾನ ಗಳಿಸಿ ಸುವರ್ಣ ಸಾಧನೆ ಮಾಡಿದ್ದಾರೆ.









ಪ್ರಣವ್ ಗೆ ಪ್ರಶಸ್ತಿ
ವಿಸ್ಮಯ ಅಕಾಡೆಮಿಯು ಬೆಂಗಳೂರಿನ ಬನ್ನೇರುಘಟ್ಟದ ಡೆಕತ್ಲಾನ್ ನ ಮಲ್ಟಿ ಸ್ಪೋರ್ಟ್ಸ್ ಅರೇನಾದಲ್ಲಿ ಆ. 24ರಂದು ಆಯೋಜಿಸಿದ್ದ ಸಿ ಐ ಎಸ್ ಸಿ ಇ ಸ್ಕೂಲ್ ವಿಭಾಗದ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ ಪ್ರಣವ್ ಎನ್. ಎಲ್. ನೀರಬಿದಿರೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಇವರು ಉಡುಪಿಯಲ್ಲಿ ಇತ್ತೀಚೆಗೆ ನಡೆದ ವಲಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು.
ಕುನಾಲ್ 5ನೇ ಹಾಗೂ ಪ್ರಣವ್ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಇವರು ಇಬ್ಬರೂ ಸುಳ್ಯ ಸಾರ್ವಜನಿಕ ಗ್ರಂಥಾಲಯದ ಗ್ರಂಥಪಾಲಕಿ ವಾರಿಜಾ ಎ. ನೀರಬಿದಿರೆ ಹಾಗೂ ಲೋಕೇಶ್ ನೀರಬಿದಿರೆ ದಂಪತಿಯ ಪುತ್ರರು. ಇವರಿಗೆ ಕರಾಟೆ ಶಿಕ್ಷಕ ಚಂದ್ರಶೇಖರ ಕನಕಮಜಲು ಅವರು ತರಬೇತಿ ನೀಡುತ್ತಿದ್ದಾರೆ.










