ಅವರ ಅಡುಗೆ ರುಚಿ, ಸೇವೆಗಳ ಬೇಡಿಕೆಯಿಂದ ಪಂಜದಲ್ಲಿ ಉದ್ಯಮ ತೆರೆದಿದ್ದಾರೆ: ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ

ಪಂಜದ ಕಮಿಲ ಕಾಂಪ್ಲೆಕ್ಸ್‌ನಲ್ಲಿ
ಕಾತ್ಯಾಯಿನಿ ಕೆಟರರ್ಸ್ & ಸರ್ವೀಸಸ್ ಇದರ ಪಂಜ ಶಾಖೆಯು ಸೆ.7 ರಂದು ಶುಭಾರಂಭ ಗೊಂಡಿತು.









ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಮಠದ ಪರಮ ಪೂಜ್ಯ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಅವರು ಆಶೀರ್ವಾದಿಸಿ .
” ಕಳೆದ ಎಂಟು ವರ್ಷಗಳ ಹಿಂದೆ ಕಡಬದಲ್ಲಿ ಕಾತ್ಯಾಯಿನಿ ಕೆಟರರ್ಸ್ ಉದ್ಯಮ ಪ್ರಾರಂಭಿಸಿದ್ದಾರೆ. ಅವರ ಅಡುಗೆ ರುಚಿಯಿಂದ ಮತ್ತು ಪಾತ್ರೆ ಇತ್ಯಾದಿಗಳ ನೀಡುವ ಸೇವೆಯಿಂದ ಜನರು ಬಹಳ ಸಂತೃಪ್ತರಾಗಿದ್ದಾರೆ. ಅವರ ಸೇವೆಯನ್ನು ಮೆಚ್ಚಿ ಕೊಂಡವರು ಬಹಳಷ್ಟು ಬೇಡಿಕೆ ಸೃಷ್ಟಿ ಮಾಡಿದ್ದಾರೆ. ಅದರ ಫಲವಾಗಿ ಪಂಜದಲ್ಲಿ ಶಾಖೆ ತೆರೆದು ಸೇವೆ ನೀಡಲಿದ್ದಾರೆ. ಅವರ ಉದ್ಯಮ ತುಂಬಾ ಅಭಿವೃದ್ಧಿ ಹೊಂದಲಿ ಜನರಿಗೆ ಒಳ್ಳೆಯ ಸೇವೆ ದೊರೆಯಲಿ.” ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಕೆದಿಲಾಯ, ಗುರುವಂಶಿ ಕೆದಿಲಾಯ ಹಾಗೂ ಮನೆಯವರು,ಕಮಿಲ ಕಾಂಪ್ಲೆಕ್ಸ್ ಹೊನ್ನಪ್ಪ ಗೌಡ ಕಮಿಲ, ಲಕ್ಷ್ಮಣ ಗೌಡ ಬೊಳ್ಳಾಜೆ, ಅನಂತಕೃಷ್ಣ ಭಟ್ಟ ಕಾಯಂಬಾಡಿ, ಕೆ ಕೃಷ್ಮ ವೈಲಾಯ, ಸೋಮಪ್ಪ ನಾಯ್ಕ, ನೋಟರಿ ವಕೀಲರು ರಾಮಚಂದ್ರ ದೇರಾಜೆ, ರಮೇಶ್ ಕಲ್ಪರೆ, ರಘುರಾಮ ಅಮ್ಮಣ್ಣಾಯ ಕುಂಜತ್ತಾಡಿ,ಅಮರನಾಥ ರೈ ಕಂಜತ್ತೋಡಿ, ಕುಸುಮಾಧರ ಕೆರೆಯಡ್ಕ
ಮೊದಲಾದವರು ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಪ್ರಸಾದ್ ಕೆದಿಲಾಯ ನಿರೂಪಿಸಿದರು.
ನಮ್ಮಲ್ಲಿ ಸಸ್ಯಹಾರಿ ಅಡುಗೆಗೆ ಬೇಕಾಗುವ ಪಾತ್ರೆಗಳು, ಪೂಜಾ ಪಾತ್ರೆಗಳು, ಗ್ರೈಂಡರ್, ಸ್ಟವ್, ಚಯರ್, ಟೇಬಲ್‌ಗಳು ಬಾಡಿಗೆಗೆ ಲಭ್ಯ ಹಾಗೂ ಬ್ರಾಹ್ಮಣರ ಶೈಲಿಯ ಅಡುಗೆ ಮತ್ತು ಕೆಟರಿಂಗ್ ವ್ಯವಸ್ಥೆ
ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.










