ಮೊಮ್ಮಕ್ಕಳ ಜೊತೆ ಮಕ್ಕಳಾದ ಅಜ್ಜ ಅಜ್ಜಿಯಂದಿರು
ವಿನೂತನ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಸೈಂಟ್ ಬ್ರಿಜಿಡ್ಸ್ ಕನ್ನಡ ಮಾದ್ಯಮ ಶಾಲೆ
ಸುಳ್ಯ ಅಮೃತಮಹೋತ್ಸವದ ಅಂಗವಾಗಿ ಶಾಲೆಯಲ್ಲಿ ಅಜ್ಜ ಅಜ್ಜಿಯಂದಿರ ದಿನಾಚರಣೆ ಕಾರ್ಯಕ್ರಮ ಡಿ.15 ರಂದು ನಡೆಯಿತು.


ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕಿ ಶ್ರೀಮತಿ ಗಿರಿಜಾ ಉದ್ಘಾಟಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅಜ್ಜ ಅಜ್ಜಿಯಂದಿರನ್ನು ಸ್ವಾಗತಿಸಿ ಬರಮಾಡಿಕೊಂಡರು. ವಿದ್ಯಾರ್ಥಿಗಳು ಬಿಡಿಸಿದ ಗ್ರಿಟಿಂಗ್ಸ್ ನ್ನು ಅವರವರ ಅಜ್ಜ ಮತ್ತು ಅಜ್ಜಿಯಂದಿರಿಗೆ ನೀಡಿ ಕಾರ್ಯಕ್ರಮದ ಸಭಾಂಗಣಕ್ಕೆ ಬರಮಾಡಿಕೊಂಡರು.
ಮೊಮ್ಮಕ್ಕಳು ತಬ್ಬಿ ಹಿಡಿದು ಫೋಟೋ ತೆಗೆಸಿಕೊಂಡರು.
ನಂತರ ಸಭಾ ಕಾರ್ಯಕ್ರಮದಲ್ಲಿ ಮೊಮ್ಮಕ್ಕಳು ಮತ್ತು ಅಜ್ಜ ಅಜ್ಜಿಯಂದಿರು ಹಾಡು ಹಾಡಿದರು. ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೊಮ್ಮಕ್ಕಳ ಜೊತೆ ಸಂಭ್ರಮಿಸಿದರು. ಶಾಲೆ ವತಿಯಿಂದ ಅಜ್ಜ ಅಜ್ಜಿಯಂದಿರಿಗೆ ವಿವಿಧ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರು ಬಹುಮಾನ ಪಡೆದುಕೊಂಡರು. ಅಗಮಿಸಿದ ಎಲ್ಲಾ ಅಜ್ಜ ಅಜ್ಜಿಯಂದಿರನ್ನು ಶಾಲೆ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.








ಸಭಾ ಕಾರ್ಯಕ್ರಮದಲ್ಲಿ ಸೈಂಟ್ ಬ್ರಿಜಿಡ್ಸ್ ಚರ್ಚ್ ಧರ್ಮ ಗುರು, ಸಂಸ್ಥೆಯ ಕಾರ್ಯದರ್ಶಿ ರೆ.ಪಾ.ಅಲ್ವಿನ್ ಎಡ್ವರ್ಡ್ ಡಿಕುನ್ಹಾ ಶುಭ ಹಾರೈಸಿ, ” ಅಜ್ಜ ಅಜ್ಜಿ ಮತ್ತು ಮೊಮ್ಮಕ್ಕಳ ಬಾಂದವ್ಯದ ಕುರಿತು ಹಾಗೂ ಹಿರಿಯರ ಅರೋಗ್ಯ ಕಾಪಾಡಿಕೊಳ್ಳಲು ನಿರಂತರ ಉತ್ತಮ ಆಹಾರ ಸೇವೆನೆಯೊಂದಿಗೆ ನಿರಂತರ ಯೋಗ ಮತ್ತು ಎಕ್ಸಸೈಸ್ ಮಾಡಿ ಅದರ ಜೊತೆಗೆ ಮೊಮ್ಮಕ್ಕಳ ಜೊತೆ ಆಟವಾಡಿಕೊಂಡು ನಗು ನಗುತ್ತಾ ಜೀವನ ಸಾಗಿಸಿದರೆ ನೀವು ಆರೋಗ್ಯವಂತರಾಗಿರುವಿರಿ” ಎಂದು ಸಲಹೆ ನೀಡಿದರು.
ಪಾಲನ ಸಮಿತಿ ಉಪಾಧ್ಯಕ್ಷ ನವೀನ್ ಮಚಾದೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ,
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಯಶ್ವಿತ್ ಕಾಳಂಮನೆ, ಸ್ವರ್ಣಂ ಜುವೆಲ್ಸ್ ಪಾಲುದಾರ ಪ್ರವೀಣ್ ಗೌಡ,
ಹಿರಿಯ ಶಿಕ್ಷಕಿ ಶ್ರೀಮತಿ ವಲ್ಸ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಅಂತೋನಿ ಮೇರಿ ಕಾರ್ಯಕ್ರಮದಲ್ಲಿ ಸರ್ವರನ್ನೂ ಸ್ವಾಗತಿಸಿ ಅವಿಸ್ಮರಣೀಯ ಕಾರ್ಯಕ್ರಮ ನಡೆಸಿಕೊಟ್ಟರು.
ಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಕೈ ಜೋಡಿಸಿದರು.
ವಿದ್ಯಾರ್ಥಿನಿ ಕವನ ಸ್ವಾಗತಿಸಿ ವಿದ್ಯಾರ್ಥಿನಿ ತ್ರಿಷಾಲಿ ದೇಶಭಕ್ತಿಗೀತೆ ಹಾಗೂ
ವರ್ಣಿಕ ಅಭಿನಯಗೀತೆ ಹಾಡಿದರು.
ವಿದ್ಯಾರ್ಥಿನಿ ಸುದಿಕ್ಷಾ ಮತ್ತು ಶಿಕ್ಷಕಿ ದೀಪಿಕಾ ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.



