ನಿಂತಿಕಲ್ಲು : ಈದ್‌ ಮೀಲಾದ್‌ ಆಚರಣೆ

0

ಬೃಹತ್‌ ಮೀಲಾದ್‌ ರ‍್ಯಾಲಿ

ಮಕ್ಕಳ ಸಾಂಸ್ಕೃತಿಕ ಕಲರವ

ನಿಂತಿಕಲ್ಲು ಬದ್ರಿಯಾ ಜುಮಾ ಮಸ್ಜಿದ್‌ ವತಿಯಿಂದ ಪ್ರವಾದಿ ಮುಹಮ್ಮದ್‌ ಪೈಗಂಬರರ 1500 ನೇ ಜನ್ಮದಿನಾಚರಣೆ ಈದ್‌ ಮಿಲಾದ್‌ ಕಾರ್ಯಕ್ರಮವನ್ನು ಸೆ. 9 ರಂದು ವಿಜೃಂಭಣೆಯಿಂದ ಆಚರಿಸಲಾಯಿತು.

ಮುಂಜಾನೆ ಮೌಲೂದು ನೊಂದಿಗೆ ಆರಂಭಗೊಡ ಕಾರ್ಯಕ್ರಮದಲ್ಲಿ ಆಕರ್ಷಕ ಮೀಲಾದ್‌ ವಾಹನ ರ‍್ಯಾಲಿ ನಡೆಯಿತು. ನಂತರ ಅರೆಬಿಕ್‌ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಮದ್ಹೇ ಮದೀನಾ 2025 ನಡೆಯಿತು. ಕಾರ್ಯಕ್ರಮವನ್ನು ಜಮಾಅತ್‌ ಖತೀಬ್‌ ಜಾಫರ್‌ ಸಹದಿ ಪಳ್ಳತ್ತೂರು ಉದ್ಘಾಟಿಸಿದರು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್‌ ಅದ್ಯಕ್ಷ ಅಬ್ದುಲ್‌ ಗಪೂರ್‌ ವಹಿಸಿದ್ದರು.

ಮುಹದ್ಸಿನ್‌ ಮುಸ್ತಪಾ ಝುಹುರು, ಸಹ ಅದ್ಯಾಪಕ ನಿಝಾಮುದ್ದೀನ್‌ ಫಾಳಿಲಿ, ಉಪಾಧ್ಯಕ್ಷ ಇಬ್ರಾಹಿಂ ಕಜೆ , ಕಾರ್ಯದರ್ಶಿ ಅಬ್ದುಲ್‌ ರಹಿಮಾನ್‌ ಮಾಜಿ ಅಧ್ಯಕ್ಷರುಗಳಾದ ಅಬ್ದುಲ್ಲ ಬ್ರದರ್ಸ್‌, ಎಂ ಪಿ ಮಹಮ್ಮದ್‌ ಎ ಎಂ ಮಹಮ್ಮದ್‌ ಉಮ್ಮರ್‌ ಕಜೆ, ಯೂತ್‌ ಕೌನ್ಸಿಲ್‌ ಅಧ್ಯಕ್ಷ ನಮಾಝ್‌ ಬ್ರದರ್ಸ್‌ , ನಿವೃತ್ತ ಎ ಎಸ್‌ ಐ ಮಹಮ್ಮದಾಲಿ ಗುತ್ತಿಗೆ, ಅಬ್ದುಲ್‌ ರಹಿಮಾನ್ ಪೋಳಾಜೆ‌ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಖತೀಬ್‌ ಜಾಫರ್‌ ಸಹದಿ ರವರ ನೇತೃತ್ವದಲ್ಲಿ ಮೌಲೂದ್‌ ಪಾರಾಯಣ ನಡೆಯಿತು.

ಈ ಸಂದರ್ಭದಲ್ಲಿ ಬಹುಮಾನಗಳ ಪ್ರಾಯೋಜಕರಾದ ನವಾಜ್‌ ರನ್ನು ಸನ್ಮಾನಿಸಲಾಯಿತು. ಅಬ್ದುಲ್‌ ಗಪೂರ್‌ ಸ್ವಾಗತಿಸಿ ಶರೀಪ್‌ ಜಿ ವಂದಿಸಿದರು. ಜಬ್ಬಾರ್‌ ಹನೀಪಿ ಕಾರ್ಯಕ್ರಮ ನಿರೂಪಿಸಿದರು.

ಸ್ವಲಾತ್‌ ಸಮಿತಿ ಎಸ್‌ ಬಿ ಎಸ್‌, ಯೂತ್‌ ಕೌನ್ಸಿಲ್‌ ಕಾರ್ಯಕ್ರಮದಲ್ಲಿ ಸಹಕರಿಸಿತು.