ತಾಲೂಕು ಮಟ್ಟದ ಪಿಯು ವಿಭಾಗದ ಕಬಡ್ಡಿ ಪಂದ್ಯಾಟ: ಸುಳ್ಯ ಎನ್ನೆoಪಿಯುಸಿ ಹುಡುಗರ ತಂಡ ಚಾಂಪಿಯನ್

0

ಶಾಲಾ ಶಿಕ್ಷಣ ಇಲಾಖೆ (ಪ.ಪೂ) ಮತ್ತು ಎನ್ನೆoಪಿಯು ಕಾಲೇಜು ಅರಂತೋಡು ಇವರ ಸಹಯೋಗದಲ್ಲಿ ಸೆ. 11ರಂದು ಅರಂತೋಡು ಎನ್.ಎಂ.ಪಿ.ಯುನಲ್ಲಿ ನಡೆದ ಹುಡುಗರ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜು ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸರ್ವಾoಗೀಣ ಆಟಗಾರನಾಗಿ ಪ್ರಥಮ ಕಲಾ ವಿಭಾಗದ ಪ್ರಮೋದ್ ಎಂ.ಯು, ಉತ್ತಮ ಹಿಡಿತಗಾರನಾಗಿ ಪ್ರ. ವಾಣಿಜ್ಯ ವಿಭಾಗದ ಪ್ರೀತಮ್ ಮುಗದೂರ್ ಆಯ್ಕೆಯಾಗಿದ್ದಾರೆ. ಇವರಿಗೆ ನಾಗರಾಜ್ ನಾಯ್ಕ್ ಭಟ್ಕಳ ತರಬೇತಿ ನೀಡಿದ್ದರು. ಸಾಧಕ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕ -ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.