ಯಾದವಸಭಾ ಪ್ರಾದೇಶಿಕ ಸಮಿತಿ ಕಡಬ ಇದರ ಮಹಾಸಭೆ ಹಾಗೂ ವಿದ್ಯಾರ್ಥಿ ಪುರಸ್ಕಾರ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿವಿಧ ಆಟೋ ಸ್ಪರ್ಧೆ ಸೆ. ೭ರಂದು ನಡೆಯಿತು ಕಾರ್ಯಕ್ರಮವನ್ನು ಯಾದವ ಸಭಾ ಜಿಲ್ಲಾ ಕಾರ್ಯದರ್ಶಿಯವರಾದ ಸದಾನಂದ ಕಾವೂರು ಇವರು ಉದ್ಘಾಟಿಸಿದರು ಗೌರವಾಧ್ಯಕ್ಷರಾದ ಕೆ ಪಿ ಮೋಹನ್ ಮತ್ತು ಕೋಶಾಧಿಕಾರಿಯವರಾದ ಶ್ರೀಧರ ಮಣಿಯಾಣಿಯವರು ಪ್ರಾಸ್ತಾವಿಕ ಮಾತುಗಳಾಡಿದರು.
ಸಭೆಯಲ್ಲಿ ತಾಲೂಕು ಸಮಿತಿ ಅಧ್ಯಕ್ಷರಾದ ಕರುಣಾಕರ ಹಾಸ್ಪಾರೆ ಇವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ನೂತನ ಕಾರ್ಯಕಾರಿ ಸಮಿತಿಗೆ ಸಲಹೆ ಸೂಚನೆಯನ್ನು ನೀಡಿದರು. ಅಧ್ಯಕ್ಷರಾದ ಶ್ರೀಮತಿ ಸೀತಾಚಂದ್ರನ್ ಅಧ್ಯಕ್ಷೀಯ ಭಾಷಣ ಮಾಡಿದರು.









ತಾಲೂಕು ಉಪಾಧ್ಯಕ್ಷರಾದ ಬಾಲಕೃಷ್ಣ ಮನೆ ಅಡ್ಡಬೈಲು ಭಾಗವಹಿಸಿದ್ದರು. ಕಾರ್ಯದರ್ಶಿ ಸಂದೀಪ್ ವರದಿ ಮಂಡನೆ ಮಾಡಿದರು. ಶ್ರೀಮತಿ ಮಂಜುಶಾ ಗಿರೀಶ್ ಸ್ವಾಗತಿಸಿ, ಶ್ರೀಮತಿ ಕಮಲಾಕ್ಷಿ ಮೋಹನ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಕೆ.ಸಿ. ಮೋಹನ್ ಲಿಂಟ್‌ಟೇಪ್ ಮನೆ, ಅಧ್ಯಕ್ಷರಾಗಿ ಶ್ರೀಧರ ಮಣಿಯಾಣಿ, ಉಪಾಧ್ಯಕ್ಷರಾಗಿ ಗಿರೀಶ್, ಕಾರ್ಯದರ್ಶಿಯಾಗಿ ಸಂದೀಫ್ ಎಸ್. ಶೆಟ್ಟಿಬೈಲು, ಜೊತೆ ಕಾರ್ಯದರ್ಶಿಯಾಗಿ ಮಂಜುಳಾ ಗಿರೀಶ್, ಖಜಾಂಜಿಯಾಗಿ ಸಚಿತ್ ಎಸ್.ಸಿ. ಶೆಟ್ಟಿಬೈಲು ಆಯ್ಕೆಯಾದರು.










