ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ

0

ಒಟ್ಟು ರೂ. 225 ಕೋಟಿ ವ್ಯವಹಾರ, ನಿವ್ವಳ ಲಾಭ ರೂ.9. 5 ಲಕ್ಷ

ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಕೇಶವ ಕರ್ಮಜೆ ಯವರ ಅಧ್ಯಕ್ಷತೆಯಲ್ಲಿ ಸೆ.14 ರಂದು ಕುಕ್ಕುಜಡ್ಕದ ಅಮರ ಸಹಕಾರ ಸೌಧ ದಲ್ಲಿ ನಡೆಯಿತು.

ಆರಂಭದಲ್ಲಿ ಗತ ವರ್ಷದಲ್ಲಿ ಅಗಲಿದ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ವಾರ್ಷಿಕ ವರದಿಯನ್ನು ಸಂಘದ ಸಿಇಒ ಮೋಹನ್ ಕುಮಾರ್ ಪಿ ಮಂಡಿಸಿದರು.

ಅಮರಮುಡ್ನೂರು ಮತ್ತು ಅಮರಪಡ್ನೂರು ಗ್ರಾಮಗಳನ್ನು ಒಳಗೊಂಡಿದ್ದು ವರದಿ ವರ್ಷದಲ್ಲಿ 2066 ಎ ತರಗತಿಯ ಸದಸ್ಯರನ್ನು ಹೊಂದಿದೆ. 58 ಮಂದಿ ಸಿ. ತರಗತಿಯ ಸದಸ್ಯರಿದ್ದಾರೆ.
ವರದಿ ವರ್ಷದಲ್ಲಿ 4ಕೋಟಿ 84ಲಕ್ಷ ಪಾಲು ಬಂಡವಾಳವಿದೆ.


ರೂ. 17 ಕೋಟಿ 53 ಲಕ್ಷ ಠೇವಣಾತಿ ಹೊಂದಿದೆ.
ಸಾಲ ರೂ. 40ಕೋಟಿ 86 ಲಕ್ಷದಷ್ಟು ವಿತರಿಸಲಾಗಿದ್ದು ಶೇ.99.09ವಸೂಲಾತಿಯಾಗಿದೆ. ಮಾರಾಟ ವಿಭಾಗದಲ್ಲಿ ಸಂಘಕ್ಕೆ 86 ಸಾವಿರ ಆದಾಯ ಬಂದಿದ್ದು
ಶೇ. 55% ರಷ್ಟು ಅಧಿಕವಾಗಿದೆ.ಒಟ್ಟು ವ್ಯವಹಾರ ರೂ. 225 ಕೋಟಿ 38 ಲಕ್ಷದಷ್ಟು ಮಾಡಲಾಗಿದ್ದು ಪ್ರಸ್ತುತ ವರ್ಷದಲ್ಲಿನಿವ್ವಳ ಲಾಭ 9,51,291/- ಹೊಂದಿದೆ.

ಪ್ರತಿ ವರ್ಷಮಹಾಸಭೆಯಲ್ಲಿ ಸದಸ್ಯರ ಸಂಖ್ಯೆ ಹೆಚ್ಚುವರಿ ಮಾಡುವಂತೆಪ್ರಸ್ತಾಪಿಸಲಾಗಿದೆ.10 ವರ್ಷದಲ್ಲಿ ಸದಸ್ಯರ ಸಂಖ್ಯೆ ಹೆಚ್ಚು ಮಾಡದೆ
ಸಂಘದಲ್ಲಿವ್ಯವಹಾರ ಕುಂಠಿತಗೊಂಡಿದೆ. ಇದರಿಂದಾಗಿ ಸಂಘದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಸದಸ್ಯತ್ವ ಅಭಿಯಾನ ಮಾಡಿ ಇದರಿಂದ ವ್ಯವಹಾರ ಹೆಚ್ಚಾಗುವುದು. ಫೈನಾನ್ಸ್ ಮ್ಯಾನೇಜ್ಮೆಂಟ್ ಲೋಪದಿಂದಾಗಿ ಸಂಘ ಲಾಭಕ್ಕೆ ಬರುತ್ತಿಲ್ಲ. ಹಿಂದಿನ ಆಡಳಿತ ಮಂಡಳಿ ಮತ್ತು ಪ್ರಸ್ತುತ ಮಂಡಳಿಯವರು ಗಮನಹರಿಸದಿರುವ ಕಾರಣಕ್ಕೆ ಸದಸ್ಯರ ಸೇರ್ಪಡೆಯಾಗಿಲ್ಲ.


ಭೂಮಿಯ ಮೌಲ್ಯವನ್ನು ನಿಗದಿಪಡಿಸಿಕೊಂಡು ಒಂದೇ ಬಾರಿ ಅಡಮಾನ ಮಾಡಿಕೊಳ್ಳಬೇಕು. ಇದರಿಂದ ಕೃಷಿಕರಿಗೆ ಸದಸ್ಯರಿಗೆ ವಾಹನ ಸಾಲ ನೀಡುವಾಗ ಯಾವ ರೀತಿಯಾಗಿ ಡಾಕ್ಯುಮೆಂಟ್ ಮಾಡಿಕೊಳ್ಳುತ್ತಿರಿ ಅದರಂತೆ ಭೂಮಿ ಅಡಮಾನ ಸಾಲವನ್ನು ಕೂಡ ನೀಡಬೇಕು ಇದು ಸುಲಭ ರೀತಿಯಲ್ಲಿ ವ್ಯವಹಾರ ಮಾಡಲು ಸಾಧ್ಯವಾಗುವುದು.
ಸಂಘದ ಕಟ್ಟಡದ ಮೇಲ್ಭಾಗದಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿ ಸಂಘಕ್ಕೆ ಬೇಕಾದ ವಿದ್ಯುತ್ ಪೂರೈಕೆ ಮಾಡಿಕೊಂಡು ಉಳಿಕೆಯಾದ ವಿದ್ಯುತ್ತನ್ನು ಮೆಸ್ಕಾಂನೊಂದಿಗೆ ನೀಡಿದರೆ ಅದರಲ್ಲಿಯೂ ಉಳಿಕೆಯಾಗುವುದು ಎಂದು ಎಂ.ಜಿ ಸತ್ಯನಾರಾಯಣ ರವರು ಸಲಹೆ ನೀಡಿದರು

ಈಗಾಗಲೇ ಸಂಘದ ಸದಸ್ಯರಿಗೆ ಸ್ವಂತ ನಿಧಿಯಿಂದ ಬೇರೆ ಬೇರೆ ಸ್ತರಗಳ ಸಾಲ ನೀಡಲಾಗುತ್ತಿದೆ. ಭೂಮಿ ಅಡಮಾನ ಮಾಡಿಕೊಂಡು ಒಂದೇ ಬಾರಿಗೆ ಮೌಲ್ಯ ನಿಗದಿಪಡಿಸಿ ಸಾಲ ಹೇಗೆ ನೀಡಬಹುದೆಂಬುದರ ಬಗ್ಗೆ ಬೖಲಾದಂತೆ ಕಾನೂನು ಪ್ರಕಾರ ಕಾರ್ಯಗತ ಮಾಡುವ ಬಗ್ಗೆ ಚಿಂತಿಸುವುದಾಗಿ
ರಾಧಾಕೃಷ್ಣ
ಬೊಳ್ಳೂರು ತಿಳಿಸಿದರು.

ಸಂಘದ ಅಧ್ಯಕ್ಷ ಕೇಶವ ಕರ್ಮಾಜೆ ಯವರು ಮಾತನಾಡಿ ಗತ ವರ್ಷದಲ್ಲಿ
ಶೇ 100% ವಸೂಲಾತಿಗೆ
ಡಿ. ಸಿ. ಸಿ ಬ್ಯಾಂಕಿನಿಂದ ಅತುತ್ತಮ ಪ್ರೋತ್ಸಾಹಕ ಪ್ರಶಸ್ತಿ ಸಂಘಕ್ಕೆ ಲಭಿಸಿದೆ. ನಮ್ಮ ಸಂಘದ ಸದಸ್ಯರು ಬೇರೆ ಬ್ಯಾಂಕಿಗೆ ಹೋಗದೆ ನಮ್ಮ ಸಂಘದಲ್ಲಿ ಇತರ ಸಾಲ ಪಡೆದು ಕ್ಲಪ್ತ ಸಮಯದಲ್ಲಿ ಪಾವತಿಸಿ ಸಹಕರಿಸಬೇಕು. ವ್ಯಾಪಾರ ಮಾರಾಟ ಮಳಿಗೆಯಿಂದ ಸಾಮಾಗ್ರಿಗಳನ್ನು, ಕೃಷಿ ಉಪಕರಣಗಳನ್ನು, ಗೊಬ್ಬರ ಖರೀದಿಸಿ ಅಭಿವೃದ್ಧಿಗೆ ಸ್ಪಂದಿಸಬೇಕು. ಕೃಷಿ ಉತ್ಪನ್ನಗಳನ್ನು ನಮ್ಮ ಸಂಘಕ್ಕೆ ನೀಡಿ ಉತ್ತಮ ಗುಣ ಮಟ್ಟದ ಉತ್ಪನ್ನಗಳಿಗೆ ಉತ್ತಮ ಬೆಲೆ ನೀಡುತ್ತೇವೆ. ಸುಸಜ್ಜಿತ ಸಭಾಭವನ ಕಟ್ಟಡನಿರ್ಮಿಸಲಾಗಿದ್ದು
ಕಟ್ಟಡದ ಸಾಲ ಪಾವತಿಸಲು ಬಾಕಿಯಿರುವುದರಿಂದ ಸದಸ್ಯರಿಗೆ ಡಿವಿಡೆಂಟ್ ನೀಡಲು ತೊಂದರೆಯಾಗಿದೆ. ಸದಸ್ಯತ್ವ ಅಭಿಯಾನ ಮಾಡುವ ಮೂಲಕ ಸದಸ್ಯರನ್ನು ಹೆಚ್ಚಿಸುವ ಪ್ರಯತ್ನ ಮಾಡಲಾಗುವುದು.
ಸೋಲಾರ್ ಪ್ಯಾನೆಲ್ ಅಳವಡಿಸುವ ಬಗ್ಗೆ ಮಂಡಳಿಯ ಸಭೆಯಲ್ಲಿ ಚರ್ಚಿಸಿಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಪಡೆದ ಗ್ರಾಮದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ವಾರ್ಷಿಕವಾಗಿ ಸಂಘದ ಮಾರಾಟ ಮಳಿಗೆಗೆ ಕೃಷಿ ಉತ್ಪನ್ನಗಳನ್ನು ಅತಿಹೆಚ್ಚು ಮಾರಾಟ ಮಾಡಿದ ಸದಸ್ಯರನ್ನು ಹಾಗೂ ಅತ್ಯಂತ ಹೆಚ್ಚಿನ ಮೌಲ್ಯದ ಸಾಮಗ್ರಿಗಳನ್ನು ಖರೀದಿ ಮಾಡಿದ ಸದಸ್ಯರನ್ನು ಸಂಘದ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಪ್ರವೀಣ್ ಎಸ್ ರಾವ್, ನಿರ್ದೇಶಕರಾದ ಅರುಣ್ ನಾಯರ್ ಕಲ್ಲು, ಉಮೇಶ ಚಿಲ್ಪಾರು, ನಿರಂಜನ ಕಾನಡ್ಕ, ರಾಧಾಕೃಷ್ಣ ಬೊಳ್ಳೂರು, ರಘುರಾಮ, ಕೃಷ್ಣ ನಾಯ್ಕ್, ಲತೇಶ್ವರಿ ಎಂ. ಎಸ್, ವೀಣಾ ಎಂ ಡಿ, ಕುಮಾರ ಬೆಳ್ಚಪ್ಪಾಡ, ರಾಘವೇಂದ್ರ ಪಿ.ಕೆ, ಅರುಣ ಕುಮಾರ್ ಪರ್ಮಲೆ, ಮನೋಜ್ ಕುಮಾರ್ ಎಂ ಉಪಸ್ಥಿತರಿದ್ದರು.

ಸಂಘದ ಮುಖ್ಯ ಕಾರ್ಯನಿರ್ವಣಾಧಿಕಾರಿ ಮೋಹನ್ ಕುಮಾರ್ ಪಿ ಸ್ವಾಗತಿಸಿ, ನಿರ್ದೆಶಕ ಅರುಣ್ ಕುಮಾರ್ ಪರ್ಮಲೆ ವಂದಿಸಿದರು.
ಮಾಜಿ ನಿರ್ದೇಶಕ ಗಣೇಶ್ ಪಿಲಿಕಜೆ ಕಾರ್ಯಕ್ರಮ ನಿರೂಪಿಸಿದರು.