ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಪಡ್ಪು, ಸೂರ್ತಿಲ ರಸ್ತೆ

0

ಸುಳ್ಯ ಉಬರಡ್ಕ ರಸ್ತೆಯ ಪಡ್ಪು ಬಳಿ ಸೂರ್ತಿಲ, ಜಟ್ಟಿಪಳ್ಳ ಸಂಪರ್ಕ ಕಲ್ಪಿಸುವ ರಸ್ತೆಯು ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ಉಬರಡ್ಕದ ಪಡ್ಪು ಬಳಿ ಸೂರ್ತಿಲ ಕಡೆಗೆ ಇಳಿಯುವ ರಸ್ತೆಯು ಸುಮಾರು ಮೂರು ವರ್ಷದಿಂದ ಗುಂಡಿ ಬಿದ್ದು ನಿರಂತರ ಅಪಘಾತ ಸಂಭವಿಸುತ್ತಿದೆ. ಈ ಬಗ್ಗೆ ನಗರ ಪಂಚಾಯತ್‌ಗೆ ಹಲವು ಬಾರಿ ತಿಳಿಸಿದ ಬಳಿಕ ಸ್ಥಳೀಯ ನ.ಪಂ.ಸದಸ್ಯರು, ಅಧ್ಯಕ್ಷರು, ಮುಖ್ಯಾಧಿಕಾರಿ ಹಾಗೂ ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ರಸ್ತೆಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದರೂ ಇದುವರೆಗೆ ಯಾರೂ ಆ ಕಡೆ ಗಮನಹರಿಸಿಲ್ಲ.

ಈ ರಸ್ತೆಯಲ್ಲಿ ಮುಂದೆ ಸಾಗುವಾಗ ಬೊಳಿಯಮಜಲು ಬಳಿ ರಸ್ತೆ ಬದಿ ಬೃಹದಾಕಾರದ ಗುಂಡಿ ಇದ್ದು ಹಲವು ವಾಹನಗಳು ಆ ಗುಂಡಿಗೆ ಬಿದ್ದು ಅಪಘಾತ ಸಂಭವಿಸಿದೆ.