ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ವೀರ ರಾಣಿ ಅಬ್ಬಕ್ಕ ಅವರ ೫೦೦ನೇ ಜಯಂತ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ರಾಣಿ ಅಬ್ಬಕ್ಕ ರಥಯಾತ್ರೆಗೆ ಸುಳ್ಯದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.
ಮಡಿಕೇರಿಯಿಂದ ಸಂಪಾಜೆಯಾಗಿ ಸಂಜೆ ಗಾಂಧಿನಗರಕ್ಕೆ ಆಗಮಿಸಿದ ರಥಯಾತ್ರೆಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಗಣ್ಯರು ಸ್ವಾಗತ ಕೋರಿದರು. ರಥದಲ್ಲಿದ್ದ ರಾಣಿ ಅಬ್ಬಕ್ಕ ಪ್ರತಿಮೆಗೆ ಶಾಸಕಿ ಭಾಗೀರಥಿ ಯವರು ಹಾರಾರ್ಪಣೆಗೈದರು. ನಗರ ಪಂಚಾಯತ್ ಅಧ್ಯಕ್ಷ ಶಶಿಕಲಾ ಎ. ನೀರಬಿದಿರೆ, ಹಿರಿಯರಾದ ಪಿ.ಕೆ.ಉಮೇಶ್., ಎ.ಬಿ.ವಿ.ಪಿ. ಪ್ರಮುಖರಾದ ಕುಲದೀಪ್ ಪೆಲ್ತಡ್ಕ, ನಂದನ್ ಪವಿತ್ರಮಜಲು ಪುಷ್ಪಾರ್ಚನೆಗೈದರು.















ಈ ಸಂದರ್ಭದಲ್ಲಿ ಪ್ರಮುಖರಾದ ವೆಂಕಟ್ ವಳಲಂಬೆ, ವಿಕ್ರಂ ಅಡ್ಪಂಗಾಯ, ಶೀಲಾ ಕುರುಂಜಿ, ಸೋಮಶೇಖರ ಪೈಕ, ಡಾ.ಮನೋಜ್ ಅಡ್ಡಂತಡ್ಕ, ಶ್ರೀಕಾಂತ್ ಮಾವಿನಕಟ್ಟೆ, ಸುರೇಶ್ ಕಣೆಮರಡ್ಕ, ಬಾಲಚಂದ್ರ ದೇವರಗುಂಡ, ಪ್ರದೀಪ್ ರೈ, ವಿನಯ ಕಂದಡ್ಕ, ವೆಂಕಟ್ರಮಣ ಮುಳ್ಯ, ಶೀನಪ್ಪ ಬಯಂಬು, ಚಿದಾನಂದ ಕುದ್ಪಾಜೆ, ಸುಂದರ ಕಾಡುಸೊರಂಜ, ಹರ್ಷಿತ್ ಕಾರ್ಜ, ಪುಷ್ಪಾ ಮೇದಪ್ಪ, ಹೇಮಂತ್ ಕಂದಡ್ಕ, ಹೇಮಂತ್ ಮಠ, ಗಿರೀಶ್ ಕಲ್ಲುಗದ್ದೆ, ಸೋಮನಾಥ ಪೂಜಾರಿ, ಭಾರತಿ ಉಳುವಾರು, ನಿಕೇಶ್ ಉಬರಡ್ಕ, ರಂಜಿತ್ ಎನ್.ಆರ್., ಸುನಿಲ್ ಕೇರ್ಪಳ, ಸುಧಾಕರ ಕುರುಂಜಿಭಾಗ್, ಬೂಡು ರಾಧಾಕೃಷ್ಣ ರೈ, ಅವಿನಾಶ್ ಕುರುಂಜಿ, ವರ್ಷಿತ್ ಚೊಕ್ಕಾಡಿ, ನವೀನ್ ಎಲಿಮಲೆ, ಜಗದೀಶ್ ಡಿ.ಪಿ., ಪ್ರದ್ಯುಮ್ನ ಉಬರಡ್ಕ, ಗಣೇಶ್ ಉದನಡ್ಕ, ರಜತ್ ಅಡ್ಕಾರ್, ಪ್ರದೀಪ್ ಕಣಕ್ಕೂರು, ತಿಮ್ಮಪ್ಪ ನಾವೂರು, ಕೃಷ್ಣರಾಜ್ ನರಿಯೂರು, ಕಿಶನ್ ಜಬಳೆ, ಸಂದೀಪ್ ವಳಲಂಬೆ ಸುಳ್ಯ ಗಾಂಧಿನಗರದದಿಂದ ಆರಂಭಗೊಂಡ ಪಂಜಿನ ಮೆರವಣಿಗೆಯಲ್ಲಿ ಪ್ರಮುಖರು ಹಾಗೂ ನೂರಾರು ಮಂದಿ ಎಬಿವಿಪಿ ಕಾರ್ಯಕರ್ತರು ಭಾಗವಹಿಸಿದ್ದರು.
ಬಳಿಕ ಜ್ಯೋತಿ ವೃತ್ತದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಎಬಿವಿಪಿ ಮಂಗಳೂರು ವಿಭಾಗ ಪ್ರಮುಖ್ ಕೇಶವ ಬಂಗೇರ ಕಾರ್ಯಕ್ರಮದ ಕುರಿತು ವಿವರ ನೀಡಿದರು.ಎಬಿವಿಪಿ ಪ್ರಾಂತ ಕಾರ್ಯದರ್ಶಿ ಪ್ರವೀಣ್ ಹೆಚ್.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಬಿವಿಪಿ ಪುತ್ತೂರು ಜಿಲ್ಲಾ ಸಂಚಾಲಕ ಸಮನ್ವಿತ್, ವಿಭಾಗ ಖೇಲೋ ಭಾರತ್ ಸಂಯೋಜಕ ನಂದನ್, ಸುಳ್ಯ ನಗರ ಸಂಯೋಜಕ ಕುಲ್‌ದೀಪ್ ಪೆಲಡ್ಕ, ಮೈಸೂರು ಮಹಾ ನಗರ ಸಂಘಟನಾ ಕಾರ್ಯದರ್ಶಿ ಮಂದಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.










