ನೂತನ ಪದಾಧಿಕಾರಿಗಳು: ಅಧ್ಯಕ್ಷ -ಭರತ್ ರಾಜ್, ಕಾರ್ಯದರ್ಶಿ- ವಿಶಾಲ್ ಕೆ. ವಿ, ಖಜಾಂಜಿ -ವಿಜೇತ್ ಪಿ. ಎಸ್ ರವರಿಗೆ ಪದ ಪ್ರಧಾನ
ಸುಳ್ಯದ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ವತಿಯಿಂದ ಇಂಜಿನಿಯರ್ಸ್ ದಿನಾಚರಣೆಯ ಸೆ.೧೫ ರಂದು ಅಂಬೆಟಡ್ಕದಲ್ಲಿರುವ ವರ್ತಕರ ಭವನದಲ್ಲಿ ನಡೆಯಿತು.
ಅಸೋಸಿಯೇಷನ್ ಅಧ್ಯಕ್ಷ ಇಂಜಿನಿಯರ್ ಶ್ಯಾಮ್ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಇಂಜಿನಿಯರ್ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್, ಪ್ರೊಫೆಸರ್
ಡಾ. ಪಾಲಾಕ್ಷಪ್ಪ ಕೆ, ಅಸೋಶಿಯೇಷನ್ ಗೌರವಾಧ್ಯಕ್ಷರಾದ ಇಂಜಿನಿಯರ್ ಸುಮಿತ್ರ ಡಿ. ಎಂ, ಕಾರ್ಯದರ್ಶಿ ನವನೀತ್ ರೈ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಂದಿನ ೨೦೨೫-೨೬ ನೇ ಸಾಲಿನನೂತನ ಅಧ್ಯಕ್ಷರಾಗಿ ಇಂಜಿನಿಯರ್ ಭರತ್ ರಾಜ್, ಕಾರ್ಯದರ್ಶಿ ಇಂಜಿನಿಯರ್ ವಿಶಾಲ್ ಕೆ. ವಿ, ಖಜಾಂಜಿ ಇಂಜಿನಿಯರ್ ವಿಜೇತ್ ಪಿ. ಎಸ್. ರವರಿಗೆ ಪದ ಪ್ರಧಾನ ಮಾಡಲಾಯಿತು.















ಈ ಸಂದರ್ಭದಲ್ಲಿ ಗ್ರೀನ್ ಬಿಲ್ಡಿಂಗ್ ವಿಷಯದ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ಕಾರ್ಯಾಗಾರವನ್ನುಪ್ರೊಫೆಸರ್ ಡಾ.ಪಾಲಾಕ್ಷಪ್ಪರವರು ನಡೆಸಿಕೊಟ್ಟರು.
ಅವರನ್ನುಅಸೋಸಿಯೇಷನ್ ವತಿಯಿಂದ ಸನ್ಮಾನಿಸಲಾಯಿತು. ಸಾಧಕ ಇಂಜಿನಿಯರ್ ವಿದ್ಯಾರ್ಥಿಗಳಾದ ಪ್ರಿನ್ಸ್ ಮತ್ತು ಕು. ಸೌಮ್ಯ ಕೆ ರವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು.
ಇಂಜಿನಿಯರ್ ಕೃಷ್ಣರಾಜ್ ಕೇರ್ಪಳ ಪ್ರಾರ್ಥಿಸಿದರು. ಇಂಜಿನಿಯರ್ ನವನೀತ್ ರೈ ಸ್ವಾಗತಿಸಿದರು. ಇಂಜಿನಿಯರ್ ವಿಜೇತ್ ಪಿ. ಎಸ್ ವಂದಿಸಿದರು. ಇಂಜಿನಿಯರ್ ಗಿರೀಶ್ ನಾರ್ಕೋಡು ಕಾರ್ಯಕ್ರಮ ನಿರೂಪಿಸಿದರು. ಅಸೋಸಿಯೇಷನ್ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.










