ಮೋದಿ ಜನ್ಮ ದಿನಾಚರಣೆಯಿಂದ, ಗಾಂಧಿ ಜಯಂತಿ ತನಕ
ನಿರಂತರ 16 ದಿನಗಳ ಕಾಲ ಸ್ವಚ್ಚತಾ ಕಾರ್ಯ, ಸಾಥ್ ನೀಡಲಿರುವ ವಿವಿಧ ಸಂಘಟನೆಗಳು

ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ಜಾರಿಗೊಳಿಸಲಾಗುತ್ತಿದೆ. ಪ್ರತಿ ವಾರವು ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನಿಂದ ನಡೆಯುತ್ತಿದ್ದ ಸ್ವಚ್ಚತಾ ಕಾರ್ಯಕ್ರಮ ವನ್ನು ಮುಂದುವರೆಸಿ ಭಾರತ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 75 ನೇ ಹುಟ್ಟು ಹಬ್ಬದ ದಿನ ಸೆ.17 ರಿಂದ ನಿರಂತರವಾಗಿ 16 ದಿನಗಳ ಕಾಲ ಅ 2.ರಂದು ಗಾಂಧಿ ಜಯಂತಿಯ ಪುಣ್ಯ ದಿನದವರೆಗೆ ನಡೆಯಲಿರುವುದು.
















ಸೆ.17 ರಂದು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಹಾಗೂ ಡಾ. ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಕುಮಾರಧಾರ ಸ್ನಾನಘಟ್ಟ ಹಾಗೂ ಪಾರ್ಕಿಂಗ್ ಪರಿಸರದಲ್ಲಿ ಸ್ವಚ್ಛತೆಯನ್ನು ಮಾಡಲಾಗಿದೆ. ಸಮಾಜ ಸೇವಾ ಟ್ರಸ್ಟ್ ಸುಮಾರು 60 ಸ್ವಯಂಸೇವಕರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಸೆ.18 ರಂದು ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಎದುರುಗಡೆಯಿಂದ ಮುಖ್ಯರಸ್ತೆ ಪಾರ್ಕಿಂಗ್ ಸ್ಥಳಗಳಲ್ಲಿ ಸ್ಥಳೀಯ ಕುಮಾರಸ್ವಾಮಿ ವಿದ್ಯಾಲಯದ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳಿಂದ ಸ್ವಚ್ಚತಾ ಕಾರ್ಯ ಹಮ್ಮಿಕೊಳ್ಳಲಾಗಿದೆ . ಇಂದು ಕಡಬ ತಾಲೂಕು ಸಂಜೀವಿನಿ ಒಕ್ಕೂಟಗಳ ಸಮನ್ವಯ ಅಧಿಕಾರಿ ಜಗತ್,
ಸುಬ್ರಹ್ಮಣ್ಯ ಗ್ರಾ. ಪಂ.ಅಭಿವೃದ್ಧಿ ಅಧಿಕಾರಿ ಮಹೇಶ್, ಕಾರ್ಯದರ್ಶಿ ಮೋನಪ್ಪ ಡಿ, ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ, ಕುಮಾರಸ್ವಾಮಿ ವಿದ್ಯಾಲಯದ ಸಂಚಾಲಕ ಚಂದ್ರಶೇಖರ ನಾಯರ್, ಪ್ರಾಂಶುಪಾಲ ಸಂಕೀರ್ತ ಹೆಬ್ಬಾರ್, ಉಪನ್ಯಾಸಕರುಗಳಾದ ಸುಜಿತ್ ಕುಮಾರ್, ಸುಜಾತ, ಚೇತನ, ದುರ್ಗಾ ಲಕ್ಷ್ಮಿ, ಸಂಧ್ಯಾ, ನವ್ಯ, ಸುಷ್ಮಾ, ಹಾಗೂ ಪ್ರಥಮ ಪಿಯುಸಿ 80 ವಿದ್ಯಾರ್ಥಿಗಳು ಮತ್ತು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಪಾಲುಗೊಂಡಿದ್ದರು.











