ಮುಖ್ಯರಸ್ತೆಯಲ್ಲಿ ಹೂತುಹೋದ ಲಾರಿ -ಸುಳ್ಯ ಪೊಲೀಸ್ ಠಾಣೆಯ ಮುಂಭಾಗ ಸಂಚಾರಕ್ಕೆ ಅಡಚಣೆ

0

ಸುಳ್ಯ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಚೆನ್ನಕೇಶವ ದೇವಸ್ಥಾನಕ್ಕೆ ತಿರುಗುವ ಜಂಕ್ಷನ್‌ನಲ್ಲಿ ಲಾರಿಯ ಚಕ್ರವೊಂದು ಹೂತುಹೋಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.


ಕಳೆದ ರಾತ್ರಿ ಜೆಸಿಬಿಯಲ್ಲಿ ರಸ್ತೆ ಅಗೆದು ಪೈಪ್ ಕಾಮಗಾರಿ ಮಾಡಿ ಬೆಳಿಗ್ಗೆ ಮುಚ್ಚಿದ್ದು, ಅಲ್ಲಿ ವಾಹನ ಸಂಚಾರ ಸಂದರ್ಭ ಇಂದು ಬೆಳಿಗ್ಗೆ ವಾಹನ ಹೂತು ರಸ್ತೆ ಬ್ಲಾಕ್ ಆಗಿತ್ತು. ಅರ್ಧ ಗಂಟೆಯ ಬಳಿಕ ವಾಹನವನ್ನು ತೆಗೆದು ರಸ್ತೆ ಗುಂಡಿಯನ್ನು ಮುಚ್ಚಲಾಗಿತ್ತು. ಇದೀಗ ಸಂಜೆ ಮತ್ತೆ ಲಾರಿಯೊಂದರ ಚಕ್ರ ಹೂತುಹೋಗಿದೆ. ಪರಿಣಾಮವಾಗಿ ರಥಬೀದಿ ಮತ್ತು ಗಾಂಧಿನಗರ ಶ್ರೀರಾಂಪೇಟೆ ಮುಖ್ಯರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿ ಮೈಲುದ್ದ ವಾಹನಗಳ ಸಾಲು ಕಾಣತೊಡಗಿದೆ.