ಕಲ್ಲುಗುಂಡಿ: ನಿನ್ನೆ ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದ ಕೊಲೆ ಆರೋಪಿಗಳು ಇಂದು ಸ್ಥಳೀಯರ ವಶಕ್ಕೆ

0

ಮಡಿಕೇರಿ ಪೊಲೀಸರಿಗೆ ಮಾಹಿತಿ ನೀಡಿರುವ ಸ್ಥಳೀಯರು

ಕಲ್ಲುಗುಂಡಿ ಸಮೀಪದಿಂದ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಪಾಲಕ್ಕಾಡ್ ಮೂಲದ ಕೊಲೆ ಆರೋಪಿಗಳು ಇಂದು ದೇವರಕೊಲ್ಲಿ ಸಮೀಪ ರಬ್ಬರ್ ತೋಟದ ಮನೆಯೊಂದರಲ್ಲಿ ಸಿಕ್ಕಿ ಬಿದ್ದಿದ್ದಾರೆ.


ಸಿಕ್ಕಿ ಬಿದ್ದವರು ಓರ್ವ ಯುವಕ ಹಾಗೂ ಯುವತಿ ಇದ್ದು
ನಿನ್ನೆ ತಪ್ಪಿಸಿಕ್ಕೊಂಡಿದ್ದ ಇವರು ರಾತ್ರಿ ವೇಳೆ ರಬ್ಬರ್ ತೋಟದ ಮನೆಯ ಬಳಿ ಬಂದು ಆಶ್ರಯ ಪಡೆದು ನಿಂತಿದ್ದು ಮನೆಯವರಿಗೆ ಸಂಶಯ ಮೂಡಿ ಸ್ಥಳೀಯರಿಗೆ ತಿಳಿಸಿದ್ದಾರೆ ಎನ್ನ ಲಾಗಿದೆ.

ಸ್ಥಳೀಯರ ಇಂದು ಅವರನ್ನು ಹಿಡಿದು ಮಡಿಕೇರಿ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಬಂದಿರುವುದಾಗಿ ತಿಳಿದು ಬಂದಿದೆ.