














ಹಿರಿಯ ಜಾನಪದ ಕಲಾವಿದೆ, ಪಾಡ್ದನಗಳ ಆಗರವೆಂದು ಹೆಸರಾಗಿದ್ದ ಸುಳ್ಯ ಜಯನಗರದ ಕೊರಪೊಳು ನಾರಾಜೆಯವರು ನಿನ್ನೆ ರಾತ್ರಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಹುಶಾರಾಗಿಯೇ ಇದ್ದ ಅವರು ಎರಡು ದಿನಗಳಿಂದ ಸ್ವಲ್ಪ ಮಟ್ಟಿನ ಅನಾರೋಗ್ಯದಿಂದಿದ್ದರು. ನಿನ್ನೆ ರಾತ್ರಿ 10.12 ರ ಸುಮಾರಿಗೆ ಕೊನೆಯುಸಿರೆಳೆದರು.
ಸುಮಾರು 10 ವರ್ಷಗಳ ಹಿಂದೆ ತುಳು ಸಾಹಿತ್ಯ ಅಕಾಡೆಮಿಯಿಂ ಜಾನಪದ ಕಲಾವಿದೆ ಪ್ರಶಸ್ತಿಗೆ ಭಾಜನರಾಗಿದ್ದ ಅವರಿಗೆ ಜಾನಪದ ಪರಿಷತ್ ನಿಂದ ಎಚ್.ಎಲ್.ನಾಗೇಗೌಡ ಪ್ರಶಸ್ತಿಯೂ ಲಭಿಸಿತ್ತು.
ಮೃತರು ಪುತ್ರರಾದ ತಿಮ್ಮಪ್ಪ ನಾರಾಜೆ, ಮುದ್ದಪ್ಪ ನಾರಾಜೆ, ಪುತ್ರಿ ಗಿರಿಜ, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.










