ಬೊಳುಬೈಲು : ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಬರೆಗೆ ಗುದ್ದಿದ ಕಾರು

0

ಕಾರು ಜಖಂ- ಪ್ರಯಾಣಿಕರು ಅಪಾಯದಿಂದ ಪಾರು

ಮಾಣಿ- ಮೈಸೂರು ಹೆದ್ದಾರಿ ಬೊಳುಬೈಲು ಬಳಿ ಸ್ವಿಫ್ಟ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಬೇಲಿಗೆ ಗುದ್ದಿ ಬಳಿಕ ಬರೆಗೆ ಡಿಕ್ಕಿ ಹೊಡೆದು ಕಾರು ಸಂಪೂರ್ಣ ಜಖಂ ಗೊಂಡು ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾದ ಘಟನೆ ಸೆ ೨೦ ರಂದು ಸಂಜೆ ವರದಿಯಾಗಿದೆ.

ಸುಳ್ಯದಿಂದ ಕಾಸರಗೋಡಿಗೆ ಸಂಚರಿಸುತ್ತಿದ್ದ ದಂಪತಿ ಕಾರಿನಲ್ಲಿದ್ದು ಮುಂಭಾಗದಿಂದ ಬರುತ್ತಿದ್ದ ವಾಹನಕ್ಕೆ ಸೈಡ್ ಕೊಡಲು ಹೋದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.