ಭಾರೀ ಮಳೆಗೆ ರಸ್ತೆ ತುಂಬಾ ಮಳೆ ನೀರು – ವಾಹನ ಸವಾರರಿಗೆ ಸಂಕಷ್ಟ















ಭಾರೀ ಮಳೆ ಬಂದಾಗ ಮಳೆ ನೀರು ಪೈಚಾರು ತಿರುವು ಬಳಿ ಸಮರ್ಪಕವಾಗಿ ಚರಂಡಿಯಲ್ಲಿ ಹೋಗಲು ಸಾಧ್ಯವಾಗದೆ ರಸ್ತೆ ತುಂಬಾ ಸೇರಿಕೊಂಡು ವಾಹನ ಸವಾರರಿಗೆ ಕಿರಿಕಿರಿ ಉಂಟುಮಾಡುವ ಸನ್ನಿವೇಶ ಉಂಟಾಗುತ್ತಿದೆ.

ಸೆ ೨೦ ರಂದು ಸಂಜೆ ಸುರಿದ ಭಾರೀ ಮಳೆಗೆ ಈ ಭಾಗದ ಮಾಣಿ – ಮೈಸೂರು ಹೆದ್ದಾರಿಯಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಕೆಲಕಾಲ ಸಂಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಯಿತು. ಸ್ಥಳೀಯ ಪಂಚಾಯತ್‌ನವರು ಇತ್ತ ಗಮನಹರಿಸಿ ಇದಕ್ಕೆ ಶಾಶ್ವತವಾದ ಕೆಲಸ ಕಾರ್ಯ ಮಾಡಿ ಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.










